ಅಮೆರಿಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯ ನಿರ್ಣಯಕ್ಕಾಗಿ ನಡೆದ ರಿಪಬ್ಲಿಕನ್- ಡೆಮಾಕ್ರಟಿಕ್ ಚುನಾವಣೆಯಲ್ಲಿ ಡೆಮಾಕ್ರಿಟಿಕ್ ಅಭ್ಯರ್ಥಿ ಹಿಲರಿ ರೋಧಮ್ ಕ್ಲಿಂಟನ್ ಅವರು ನೆವೆದಾದಲ್ಲಿ ಹಾಗೂ ರಿಪಬ್ಲಿಕನ್ ಅಭ್ಯರ್ಥಿ ಜೋನ್ ಮೆಕೇನ್ ಅವರು ದಕ್ಷಿಣ ಕರೋಲಿನಾದಲ್ಲಿ ಜಯ ಸಾಧಿಸಿದ್ದಾರೆ. ಮೆಕೇನ್ ಅವರು ಮೈಕ್ ಹುಕಾಬಿ ಅವರನ್ನು ಪರಾಭವಗೊಳಿಸಿದರೆ ಹಿಲರಿ ಅವರು ಬರಾಕ್ ಒಬಾಮ ಅವರನ್ನು ಸೋಲಿಸಿ ವಿಜಯ ಪತಾಕೆ ಹಾರಿಸಿದರು. ಅಮೆರಿಕದ ಅಧ್ಯಕ್ಷ ಅಭ್ಯರ್ಥಿಯ ಚುನಾವಣೆಯಲ್ಲಿ ನೆವೆದಾದಲ್ಲಿರುವ ಹಿಸ್ಪಾನಿಕ್ ಜನರ (ದಕ್ಷಿಣ ಅಮೆರಿಕದಿಂದ ವಲಸೆ ಬಂದವರು) ಮತಗಳು ಅತೀ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ಹೇಳಲಾಗುತ್ತದೆ. ಅಮೆರಿಕದಲ್ಲಿ ಇದೀಗ ತಲೆದೋರಿರುವಂತಹ ಆರ್ಥಿಕ ಸಮಸ್ಯೆ ಮತ್ತು ಅಕ್ರಮವಾಗಿ ವಲಸೆ ಬರುವುದು ಮೊದಲಾದ ಸಮಸ್ಯೆಗಳನ್ನು ಪರಿಹರಿಸುವಂತೆ ಮತದಾರರು ಆಗ್ರಹಿಸಿದ್ದು, ಅಲ್ಲಿನ ಬಹುತೇಕ ಮಂದಿಯು ರಿಪಬ್ಲಿಕನ್ ಅಭ್ಯರ್ಥಿ ಮಿಟ್ಟ್ ರೋಮಿ ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ಬೆಂಬಲಿಸುತ್ತಾರೆ. ಹಿಲರಿ ಮತ್ತು ಒಬಾಮ ಅವರು ನೆವೆದಾದಲ್ಲಿನ ಸ್ಪರ್ಧೆಯ ಮೊದಲು ನ್ಯೂ ಹ್ಯಾಂಪ್‌ಶೈರ್ ಮತ್ತು ಲೋವಾದಲ್ಲಿ ವಿಜಯಗಳಿಸಿದ್ದರು. ನವೆದಾದಲ್ಲಿ ಹಿಲರಿ ಅವರ ಭರ್ಜರಿ ವಿಜಯದ ನಂತರ ಅಮೆರಿಕದ ಜನತೆಯು ಜ.26ರಂದು ನಡೆಯುವ ದಕ್ಷಿಣ ಕರೋಲಿನಾದ ಚುನಾವಣೆಯ ಮೇಲೆ ನಿರೀಕ್ಷೆಯನ್ನಿರಿಸಿದೆ. ನೆವೆದಾದಲ್ಲಿನ ಬಹುತೇಕ ಮತವು ಹಿಸ್ಪಾನಿಕ್ ಜನರಿಂದಾದರೆ, ದಕ್ಷಿಣ ಕರೋಲಿನಾದಲ್ಲಿನ ಆಫ್ರಿಕನ್ ಅಮೆರಿಕನ್ ಜನರ ಮತವು ಅತೀ ನಿರ್ಣಾಯಕವಾಗಿರುವುದು. ಜ.26ರಂದು ನಡೆಯುವ ಡೆಮಾಕ್ರಟಿಕ್ ಚುನಾವಣೆಯು ಕಪ್ಪು ಜನರ ಮತಗಳನ್ನಾಧರಿಸಿದ್ದು ಇದು ಹಿಲರಿ ಕ್ಲಿಂಟನ್‌ನವರಿಗೆ ಹೆಚ್ಚಿನ ಸವಾಲನ್ನು ಒಡ್ಡಿತ್ತು
|