ಅಮೆರಿಕದ ಉತ್ತರ ಕೆರೊಲಿನದಲ್ಲಿ ಹತ್ಯೆಗೊಳಗಾದ ಭಾರತೀಯ ವಿದ್ಯಾರ್ಥಿಯ ಪ್ರಕರಣವು ಗ್ಯಾಂಗ್ ಹಿಂಸಾಚಾರದಂತೆ ಗೋಚರಿಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗಳು ಸೋಮವಾರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅವನ ದೇಹವನ್ನು ಸ್ವದೇಶಕ್ಕೆ ಕಳಿಸಲು ವ್ಯವಸ್ಥೆ ಮಾಡಲಿದ್ದಾರೆ.
ಡಹ್ರಾಂನ ಡ್ಯೂರ್ ವಿವಿಯ ಪ್ರಾಟ್ ಶಾಲೆಯಲ್ಲಿ ಡಾಕ್ಟೋರೇಟ್ ಡಿಗ್ರಿ ಕಲಿಯುತ್ತಿದ್ದ 29 ವರ್ಷ ಪ್ರಾಯದ ಐಐಟಿ ಮಾಜಿ ವಿದ್ಯಾರ್ಥಿ ಅಭಿಜಿತ್ ಮೆಹ್ತೊ ಶುಕ್ರವಾರ ರಾತ್ರಿ ಕ್ಯಾಂಪಸ್ ಬಳಿ ತನ್ನ ಸ್ನೇಹಿತರಿಂದ ಗುಂಡಿಗೆ ಬಲಿಯಾಗಿದ್ದನು. ಜಾರ್ಖಂಡ್ ನಿವಾಸಿಯಾದ ಮೆಹ್ತೊ ಅವರ ದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಸೋಮವಾರ ಬಿಡುಗಡೆ ಮಾಡಿ ಅದನ್ನು ಭಾರತಕ್ಕೆ ಒಯ್ಯಲು ಸಿದ್ಧತೆ ಮಾಡಲಾಗುವುದು.
ಪತ್ತೆದಾರರು ಮತ್ತು ಅಪರಾಧ ದೃಶ್ಯದ ತಂತ್ರಜ್ಞರು ಸ್ಥಳದಲ್ಲಿ ಶನಿವಾರ ಬೆಳಿಗ್ಗೆ ತಪಾಸಣೆ ಮಾಡಿ ಕೆಲವು ಸುಳಿವುಗಳನ್ನು ಪತ್ತೆಹಚ್ಚಿದ್ದಾರೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ. ಇಬ್ಬರು ಆಂಧ್ರಪ್ರದೇಶದ ಪಿಎಚ್‌ಡಿ ವಿದ್ಯಾರ್ಥಿಗಳು ಲೂವಿಸಿಯಾನ ವಿವಿ ಕ್ಯಾಂಪಸ್‌ನಲ್ಲಿ ಗುಂಡಿಗೆ ಬಲಿಯಾದ ಒಂದು ತಿಂಗಳಲ್ಲೇ ಡ್ಯೂಕ್ ಕಂಪ್ಯೂಟೇಷನಲ್ ಮೆಕಾನಿಕ್ಸ್ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹ್ತೊ ಹತ್ಯೆಯು ಬೆಳಕಿಗೆ ಬಂದಿದೆ.
|