ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರ್ಕಾರಿ ಪಡೆಗಳು, ಎಲ್‌ಟಿಟಿಇ ಕದನ: 33 ಸಾವು
ಉತ್ತರ ಜಾಫ್ನಾ ಮತ್ತು ವಾನ್ನಿ ಜಿಲ್ಲೆಯಲ್ಲಿ ಶ್ರೀಲಂಕಾದ ಸರ್ಕಾರಿ ಪಡೆಗಳು ಮತ್ತು ತಮಿಳು ಬಂಡುಕೋರರ ನಡುವೆ ಭೀಕರ ಕಾಳಗ ನಡೆದು ಸುಮಾರು 33 ಜನರು ಸತ್ತಿದ್ದಾರೆಂದು ರಕ್ಷಣಾ ಸಚಿವಾಲಯ ಹೇಳಿದೆ.

ಎಲ್‌ಟಿಟಿಇ ನೆಲೆಗಳ ಮೇಲೆ ನಸುಕಿನ ಜಾವದಲ್ಲೇ ಬಹುಹಂತದ ದಿಢೀರ್ ದಾಳಿ ಮಾಡಿದ ಪಡೆಗಳು ಕನಿಷ್ಠ 15 ಎಲ್‌ಟಿಟಿಇ ಉಗ್ರರನ್ನು ಕೊಂದಿದ್ದಾರೆ ಮತ್ತು ಉತ್ತರ ಜಾಫ್ನಾದಲ್ಲಿ ಇನ್ನೂ 30 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಮುನ್ಪಡೆಗಳು 24 ಎಲ್‌ಟಿಟಿಇ ಬಂಕರ್‌ಗಳನ್ನು ನಾಶಮಾಡಿವೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

ಮುಹಾಮಲೈ ಮತ್ತು ಕಿಲಾಲಿ ಮುಂಚೂಣಿ ಪ್ರದೇಶಗಳಲ್ಲಿ ತಲಾ 12 ಮತ್ತು 8 ಬಂಕರ್‌ಗಳನ್ನು ಶ್ರೀಲಂಕಾ ಪಡೆಗಳು ನಾಶ ಮಾಡಿವೆ ಮತ್ತು ನಾಗರಕೋವಿಲ್ ರಕ್ಷಣಾನೆಲೆಗಳಿಗೆ ಮುಂಚಿತವಾಗಿರುವ ನಾಲ್ಕು ಎಲ್‌ಟಿಟಿಇ ಬಂಕರ್‌ಗಳನ್ನು ನಾಶ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯಗಳು ಹೇಳಿವೆ.'

ವಾನ್ನಿಯಲ್ಲಿ ಕೂಡ ಇದೇ ರೀತಿಯ ಘರ್ಷಣೆಯಲ್ಲಿ ಕನಿಷ್ಠ 16 ಎಲ್‌ಟಿಟಿಇ ಉಗ್ರರು ಭಾನುವಾರ ಹತರಾಗಿದ್ದಾರೆ. ರಕ್ಷಣಾ ಸಚಿವಾಲಯದ ಮೂಲಗಳ ಪ್ರಕಾರ ಶೋಧ ಕಾರ್ಯಾಚರಣೆಯಲ್ಲಿ ಮಿಲಿಟರಿಯು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಐವರು ಎಲ್‌ಟಿಟಿಇ ಉಗ್ರರ ದೇಹಗಳನ್ನು ಪತ್ತೆಹಚ್ಚಿದೆ.
ಮತ್ತಷ್ಟು
ಮೆಹ್ತೊ ಹತ್ಯೆ ಗ್ಯಾಂಗ್ ಹಿಂಸಾಚಾರವಲ್ಲ
ಒಬಾಮಾ ವಿರುದ್ದ ಹಿಲರಿ‌ಗೆ ಗೆಲುವು
ಬ್ರೂನಿ ತಾಜ್‌ಮಹಲ್‌ಗೆ ಒಬ್ಬಂಟಿ ಭೇಟಿ
ಶಿಯಾ ಪಂಥದ ದಾಳಿಯಲ್ಲಿ 50 ಸಾವು
ಪ್ರವಾದಿ ವ್ಯಂಗ್ಯಚಿತ್ರ: 3 ವರ್ಷ ಜೈಲುಶಿಕ್ಷೆ
ಇಂಡೋನೇಶಿಯ:ಕೋಳಿ ಜ್ವರಕ್ಕೆ 97 ಬಲಿ