ಅಮೆರಿಕದ ಯುದ್ಧವಿಮಾನಗಳು ಭಾನುವಾರ ರಾತ್ರಿ ಬಾಗ್ದಾದ್ ದಕ್ಷಿಣದ ತುದಿಯಲ್ಲಿರುವ ಅಲ್ ಕೈದಾ ನೆಲೆಗಳ ಮೇಲೆ ಮೂರನೇ ಬಾರಿಗೆ ದಾಳಿ ನಡೆಸಿದ್ದು, 30 ಗುರಿಗಳ ಮೇಲೆ ಬಾಂಬ್‌ಗಳನ್ನು ಹಾಕಿದ್ದಾಗಿ ಮಿಲಿಟರಿ ಸೋಮವಾರ ತಿಳಿಸಿದೆ. ವಾಯುದಳ, ನೌಕಾದಳದ ಎಫ್-18 ಸಮರಜೆಟ್‌ಗಳು ಮತ್ತು ಬಿ-1 ಬಾಂಬರ್‌ಗಳು ನಿಖರ ವಾಯುದಾಳಿ ನಡೆಸಿದವೆಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಜನವರಿ 10, 11ರಂದು ಅರಬ್ ಜಾಬಾರ್ ಪ್ರದೇಶದಲ್ಲಿ ಬಾಂಬ್ ದಾಳಿ ನಡೆಸಿದ ಬೆನ್ನ ಹಿಂದೆಯೇ ಈ ದಾಳಿ ನಡೆಸಲಾಗಿದ್ದು, ಒಟ್ಟು 99 ಸ್ಥಳಗಳನ್ನು ಗುರಿಯಾಗಿಸಿಕೊಂಡು 99,0000 ಪೌಂಡ್ ಬಾಂಬ್‌ಗಳನ್ನು ಹಾಕಲಾಗಿದೆ.
ಫ್ಯಾಂಟಮ್ ಫೀನಿಕ್ಸ್ ಕಾರ್ಯಾಚರಣೆಯ ಭಾಗವಾದ ಈ ದಾಳಿಯನ್ನು ಜ.8ರಂದು ಇರಾಕ್ ಮತ್ತು ಅಮೆರಿಕದ ಪಡೆಗಳು ಅಲ್ ಕೈದಾ ವಿರುದ್ಧ ಆರಂಭಿಸಿದೆ. ಈ ದಾಳಿ ಆರಂಭಿಸಿದಾಗಿನಿಂದ 1023 ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, 121 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕದ ಮಿಲಿಟರಿ ವಕ್ತಾರ ತಿಳಿಸಿದ್ದಾರೆ.
|