ನವೆಂಬರ್‌ನಲ್ಲಿ ತುರ್ತುಪರಿಸ್ಥಿತಿ ಹೇರಿದ ಬಳಿಕ ನಿಷೇಧಿತವಾದ ಪಾಕಿಸ್ತಾನ ಟೆಲಿವಿಷನ್ ಕೇಂದ್ರದ ಪ್ರಸಾರಕ್ಕೆ ಸೋಮವಾರ ಚಾಲನೆ ಸಿಕ್ಕಿದೆ ಎಂದು ಟಿವಿ ನಿಯಂತ್ರಕ ಸಂಸ್ಥೆ ತಿಳಿಸಿದೆ. ಇದೊಂದು ಬುದ್ಧಿವಂತಿಕೆಯ ಕ್ರಮ. ಚುನಾವಣೆ ಸಮೀಪಿಸುತ್ತಿದ್ದು, ಹೆಚ್ಚು ಮಾಧ್ಯಮದ ಪ್ರಚಾರದಿಂದ ಚುನಾವಣೆ ವಿಶ್ವಾಸಾರ್ಹವಾಗುತ್ತದೆ ಮತ್ತು ರಾಷ್ಟ್ರದ ಸಕಾರಾತ್ಮಕ ಬೆಳವಣಿಗೆಗೆ ನೆರವು ನೀಡುತ್ತದೆ ಎಂದು ಜಿಯೊ ಟಿವಿ ಮಾಲೀಕ ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನದಿಂದ ಟಿವಿ ಪ್ರಸಾರಗಳನ್ನು ಆರಂಭಿಸಲಾಗಿದೆ. ಮುಷರ್ರಫ್ ತುರ್ತುಪರಿಸ್ಥಿತಿ ಘೋಷಿಸಿದ ಬಳಿಕ ಜಿಯೋ ಜತೆಗೆ ಎಲ್ಲ ಖಾಸಗಿ ಟಿವಿ ಜಾಲಗಳನ್ನು ನಿಷೇಧಿಸಲಾಯಿತು. ಬಹುತೇಕ ಟಿವಿ ಕೇಂದ್ರಗಳು ನೀತಿ ಸಂಹಿತೆಗೆ ಸಹಿ ಹಾಕಿದ ಬಳಿಕ ಅವುಗಳ ಪ್ರಸಾರಕ್ಕೆ ಅವಕಾಶ ನೀಡಲಾಯಿತಾದರೂ ಜಿಯೋ ಟೀವಿ ಪ್ರಸಾರ ನಿಷೇಧವನ್ನು ತೆಗೆದಿರಲಿಲ್ಲ.
ಜಿಯೋ ಟಿವಿ ಪಾಕಿಸ್ತಾನದ ಅತ್ಯಂತ ಜನಪ್ರಿಯ ಟಿವಿಜಾಲವಾಗಿದ್ದು, ಸರ್ಕಾರವನ್ನು ಆಗಾಗ್ಗೆ ಟೀಕಿಸುತ್ತಿತ್ತೆಂದು ಹೇಳಲಾಗಿದೆ. ಮುಷರ್ರಫ್ ವಿರುದ್ಧ ಪ್ರತಿಭಟನೆಯ ನೇರಪ್ರಸಾರವನ್ನು ಜಿಯೊ ಟಿವಿ ಮಾಡಿತ್ತು.
|