ವಿಶ್ವದ ಬಲಾಢ್ಯ ಶಕ್ತಿಗಳು ಇರಾನ್ ಮೇಲೆ ದಿಗ್ಬಂಧನಗಳನ್ನು ವಿಧಿಸುವ ಬಗ್ಗೆ ಭಿನ್ನಾಭಿಪ್ರಾಯ ನಿವಾರಣೆಗೆ ಮಂಗಳವಾರ ಪ್ರಯತ್ನಿಸಲಿದ್ದು, ಟೆಹ್ರಾನ್ ಅಣು ಕಾರ್ಯಕ್ರಮವನ್ನು ಸ್ಥಗಿತಗೊಳಿಸುವಂತೆ ಹೆಚ್ಚು ಒತ್ತಡವನ್ನು ಹೇರುವುದೆಂದು ನಿರೀಕ್ಷಿಸಲಾಗಿದೆ.
ಇರಾನ್ ಗುಪ್ತವಾಗಿ ಪರಮಾಣು ಬಾಂಬ್ ತಯಾರಿಸುತ್ತಿದೆ ಎಂದು ಪಾಶ್ಚಿಮಾತ್ಯ ರಾಷ್ಟ್ರಗಳು ಶಂಕಿಸಿರುವ ನಡುವೆ, ತನ್ನ ಪರಮಾಣು ಕಾರ್ಯಕ್ರಮವು ನಾಗರಿಕ ಇಂಧನ ಬಳಕೆಗೆ ಮಾತ್ರ ಎಂದು ಇರಾನ್ ಪ್ರತಿಪಾದಿಸಿದೆ.
ಅಮೆರಿಕದ ಗುಪ್ತಚರ ವರದಿಯೊಂದರಲ್ಲಿ ಇರಾನ್ ತನ್ನ ಅಣ್ವಸ್ತ್ರ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದೆ ಎಂದು ವರದಿಮಾಡಿದ್ದರಿಂದ ರಷ್ಯಾ ಮತ್ತು ಇರಾನ್ ವಿರುದ್ಧ ಕಠಿಣ ದಿಗ್ಬಂಧನಗಳನ್ನು ಹೇರುವುದಕ್ಕೆ ವಿರೋಧ ವ್ಯಕ್ತಪಡಿಸಿದೆ. ಬ್ರಿಟನ್, ಚೀನಾ,ಫ್ರಾನ್ಸ್, ಜರ್ಮನಿ, ರಷ್ಯಾ ಮತ್ತು ಅಮೆರಿಕವು ಸಂಜೆ 4.30ಕ್ಕೆ ಭೇಟಿಯಾಗಲಿದ್ದು, 6 ಗಂಟೆಗೆ ಸುದ್ದಿಗೋಷ್ಠಿಯೊಂದನ್ನು ನಡೆಸಲಿದೆ.
|