ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಪ್ಪ ಭಯೋತ್ಪಾದಕ, ಮಗನಿಂದ ಶಾಂತಿಮಂತ್ರ
ತನ್ನ ಭಯೋತ್ಪಾದನೆ ಕೃತ್ಯಗಳ ಮೂಲಕ ಇಡೀ ಜಗತ್ತನ್ನೇ ಅಪ್ಪ ನಡುಗಿಸಿದ. ಆದರೆ ಅವನ 26 ವರ್ಷ ವಯಸ್ಸಿನ ಮಗ ಶಾಂತಿಮಂತ್ರವನ್ನು ಪಠಿಸುತ್ತಿದ್ದಾನೆ. ತನ್ನ ತಂದೆಯು ಹಿಂಸಾಚಾರವನ್ನು ತ್ಯಜಿಸಿ ಗುರಿ ಸಾಧನೆಗೆ ಬೇರೆ ದಾರಿ ಹಿಡಿಯಬೇಕೆಂದು ಮಗ ಬಯಸಿದ್ದಾನೆ. ಅಲ್ ಕೈದಾವನ್ನು ತ್ಯಜಿಸಲು ನಿರ್ಧರಿಸಿದ ಓಮರ್ ಅಲ್ ಕೈದಾ ಸೂತ್ರಧಾರ, ತನ್ನ ತಂದೆ ಒಸಾಮಾ ಬಿನ್ ಲಾಡೆನ್ ಅವರನ್ನು ನೋಡಿದ್ದು 2000ರಲ್ಲಿ. ತನ್ನ ತಂದೆ ಭಯೋತ್ಪಾದಕನೆಂದು ತನಗೆ ಗೊತ್ತಿರಲಿಲ್ಲ ಎಂದು ಓಮರ್ ಹೇಳುತ್ತಾನೆ.

ಸೆ.11ರ ಭಯೋತ್ಪಾದನೆ ದಾಳಿಗಳಿಗೆ ತಾನು ಪಶ್ಚಾತ್ತಾಪ ಪಡುವುದಾಗಿ ಅವನು ಹೇಳಿದ್ದಾನೆ. ಅಮೆರಿಕದ ಸುದ್ದಿ ಚಾನೆಲ್‌ಗಳಿಗೆ ನೀಡಿದ ಸಂದರ್ಶನದಲ್ಲಿ ಈ ಹಂತದಲ್ಲಿ ತನ್ನ ತಂದೆ ಭಯೋತ್ಪಾದನೆ ಆಂದೋಳನ ನಿಲ್ಲಿಸುವ ಅಧಿಕಾರ ಹೊಂದಿಲ್ಲವೆಂದು ಶಂಕೆ ವ್ಯಕ್ತಪಡಿಸಿದ್ದಾನೆ.

ಓಸಾಮಾ ಮೊದಲನೇ ಹೆಂಡತಿಗೆ ಜನಿಸಿದ 11 ಮಕ್ಕಳಲ್ಲಿ ನಾಲ್ಕನೆಯರಾದ ಓಮರ್ ತನ್ನ ತಂದೆ ಸ್ಫೂರ್ತಿ ನೀಡಿದ ಹಿಂಸಾಚಾರಕ್ಕೆ ತೆರೆಎಳೆಯಲು ಶಾಂತಿಮಂತ್ರವನ್ನು ಜಪಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಮತ್ತಷ್ಟು
ಲಕ್ಷ್ಮಿ ಮಿಟ್ಟಲ್‌ಗೆ ಫ್ರೆಂಚ್ ಅಧ್ಯಕ್ಷರ ಬುಲಾವ್
ಇರಾನ್ ವಿರುದ್ಧ ದಿಗ್ಬಂಧನಕ್ಕೆ ಒಮ್ಮತದ ಪ್ರಯತ್ನ
ಜಿಯೋ ಟಿವಿ ಪ್ರಸಾರಕ್ಕೆ ಪಾಕ್ ಚಾಲನೆ
ಅಲ್ ಕೈದಾ ನೆಲೆಗಳ ಮೇಲೆ ವಾಯುದಾಳಿ
ನಿಯಮ ಉಲ್ಲಂಘನೆ: ಶ್ರೀಮಂತರಿಗೆ ಹೆಚ್ಚು ದಂಡ
ಸರ್ಕಾರಿ ಪಡೆಗಳು, ಎಲ್‌ಟಿಟಿಇ ಕದನ: 33 ಸಾವು