ತಮ್ಮ ಹತ್ಯೆಯ ಬಗ್ಗೆಯ ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಅವರಿಗೆ ಮುನ್ಸೂಚನೆ ಸಿಕ್ಕಿತ್ತೆಂದು ಅವರ ಕಿರಿಯ ಸೋದರಿ ಸನಮ್ ಭುಟ್ಟೊ ತಿಳಿಸಿದ್ದಾರೆ. ಬೇನಜೀರ್ ಪಾಕಿಸ್ತಾನಕ್ಕೆ ತೆರಳುವ 2 ದಿನಗಳ ಮುಂಚೆ ತನ್ನ ಪತಿ ಅಸೀಫ್ ಅಲಿ ಜರ್ದಾರಿಗೆ ಪಿಪಿಪಿ ಅಧಿಕಾರ ಹಸ್ತಾಂತರಿಸುವ ಮರಣಪತ್ರ ಬರೆದಿದ್ದನ್ನು ಅವರು ಪ್ರಸ್ತಾಪಿಸಿದರು.
"ಕೊನೆಯಲ್ಲಿ ಮೃದುವಾದ ನೋಟ ಮತ್ತು ದುಃಖದ ಕಣ್ಣುಗಳು ಆಕೆಯ ಮುಖದಲ್ಲಿತ್ತು. ಅದನ್ನು ವಿವರಿಸಲು ಸಾಧ್ಯವಿಲ್ಲ. ಅದೊಂದು ಭಿನ್ನವಾದ ನೋಟ" ಎಂದು ಅವರು ನುಡಿದರು. ಆಕೆ ಎಲ್ಲರಲ್ಲೂ ನಯವಾಗಿ ನಡೆದುಕೊಂಡರು. ಒತ್ತಡದ ಪರಿಸ್ಥಿತಿ ಎದುರಿಸುತ್ತಿದ್ದರೂ ನಮ್ಮೆಲ್ಲರ ಬಗ್ಗೆ ಆಕೆ ಯೋಚಿಸಿದರು.
ಆಕೆ ಅಂತಿಮ ವಿದಾಯ ಹೇಳುತ್ತಿರುವಂತೆ ಗೋಚರಿಸಿತು ಎಂದು ಸನಮ್ ಹೇಳಿದ್ದಾರೆ. ತನ್ನ ಪುತ್ರಿಗೆ ಬಹುಮಾನವನ್ನು ಕೂಡ ಅವರು ತಂದಿದ್ದರು. ಪುತ್ರಿಗೆ ಹಣ ನೀಡುವ ಬದಲಿಗೆ ವಿಶೇಷ ನೆಕಲೇಸ್ ಕೊಡುಗೆಯಾಗಿ ಇತ್ತರು ಎಂದು ಡಾನ್ ಹೇಳಿಕೆ ಉಲ್ಲೇಖಿಸಿ ಸನಂ ಹೇಳಿದರು.
|