ವಿದ್ಯಾರ್ಥಿಗಳು ಚೂರಿ, ಚಾಕುಗಳನ್ನು ತರಗತಿಯೊಳಗೆ ಒಯ್ಯುವುದನ್ನು ಪತ್ತೆಹಚ್ಚಲು ವಿಮಾನನಿಲ್ದಾಣದ ಶೈಲಿಯ ಲೋಹ ಶೋಧಕ ಯಂತ್ರ ಶಾಲೆಗಳಲ್ಲಿ ಅಳವಡಿಸಲಾಗುವುದು. ರಾಷ್ಟ್ರದ ಕೆಲವು ಕಠಿಣಮಯವಾದ ಶಾಲೆಗಳಲ್ಲಿ ಇಂತಹ ಲೋಹಶೋಧಕಗಳನ್ನು ಅಳವಡಿಸುವ ಕಲ್ಪನೆಗೆ ಗೃಹಕಾರ್ಯದರ್ಶಿ ಜಾಕ್ವಿ ಸ್ಮಿತ್ ಬೆಂಬಲಿಸಿದ್ದಾರೆ.
ಶಾಲೆಗಳಲ್ಲಿ ಹಿಂಸಾಚಾರ ನಿಭಾಯಿಸುವ ಕೇಂದ್ರಬಿಂದುವಾಗಿ ಈ ಕ್ರಮವನ್ನು ನಿರೀಕ್ಷಿಸಲಾಗಿದ್ದು, ಮುಂದಿನ ತಿಂಗಳು ಸ್ಮಿತ್ ಅದಕ್ಕೆ ಚಾಲನೆ ನೀಡಲಿದ್ದಾರೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪರಾಧಿಗಳ ಸಂಖ್ಯೆಯು ಮೂರು ವರ್ಷಗಳಲ್ಲಿ ಉಲ್ಬಣಿಸಿರುವುದು ಪತ್ತೆಯಾಗಿದ್ದರಿಂದ ಈ ಯೋಜನೆ ಜಾರಿಮಾಡಲು ನಿಶ್ಚಯಿಸಲಾಗಿದೆ.
|