ಹಾಲಿವುಡ್ ಖ್ಯಾತಚಿತ್ರನಟ ಹೆತ್ ಲೆಡ್ಜರ್ ತಮ್ಮ ಮ್ಯಾನಹಟ್ಟನ್ ನಿವಾಸದಲ್ಲಿ ನಗ್ನಸ್ಥಿತಿಯಲ್ಲಿ ಸತ್ತುಬಿದ್ದಿದ್ದು, ಅವರ ಸಮೀಪದಲ್ಲಿ ನಿದ್ರೆಮಾತ್ರೆಗಳು ಬಿದ್ದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಿಗೆ 28 ವರ್ಷ ವಯಸ್ಸಾಗಿತ್ತು. ಆತ್ಮಹತ್ಯೆಯ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಟ್ರೇಲಿಯ ಸಂಜಾತ ಲೆಡ್ಜರ್,, ಸೋಹೋ ನಿವಾಸದಲ್ಲಿ ಅಂಗಮರ್ದನಕ್ಕೆ ವೇಳೆ ಗೊತ್ತುಮಾಡಿದ್ದರು ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆ ವಕ್ತಾರ ತಿಳಿಸಿದ್ದಾರೆ. ಅಂಗಮರ್ದನ ಚಿಕಿತ್ಸಕ ಮತ್ತು ಕಾವಲುಗಾರ ಲೆಡ್ಜರ್ ಅವರ ದೇಹವನ್ನು ನೋಡಿ ಪುನಶ್ಚೇತನ ನೀಡಲು ಪ್ರಯತ್ನಿಸಿದರು.
ಈ ದುರಂತದಿಂದಾಗಿ ನಮಗೆ ತೀವ್ರ ನೋವಾಗಿದೆ ಎಂದು ಲೆಡ್ಜರ್ ಪ್ರಚಾರಕ ಮಾರಾ ಬುಕ್ಸ್‌ಬಾಂ ತಿಳಿಸಿದ್ದಾರೆ. ಅವರ ಪ್ರೀತಿಪಾತ್ರರಿಗೆ ಇದು ಕಷ್ಟದ ಸಂದರ್ಭ. ನಾವು ಕುಟುಂಬದ ಖಾಸಗಿತನಕ್ಕೆ ಅವಕಾಶ ನೀಡಿ, ಊಹಾಪೋಹಗಳನ್ನು ತಪ್ಪಿಸುವಂತೆ ಕೇಳುತ್ತೇವೆ ಎಂದು ಅವರು ನುಡಿದರು.
ಹಾಲಿವುಡ್‌ನ ಪ್ರತಿಭಾನ್ವಿತ ಯುವ ನಟನ ಅಂತ್ಯ ಆಘಾತಕಾರಿಯಾಗಿದೆ. ಬ್ರೋಕ್‌ಬ್ಯಾಕ್ ಮೌಂಟನ್ ಚಿತ್ರದಲ್ಲಿ ಕೌಬಾಯಿ ಪಾತ್ರದಲ್ಲಿ ಅವರ ನಟನೆಗೆ 2006ರಲ್ಲಿ ಆಸ್ಕರ್ ಪ್ರಶಸ್ತಿ ಅವರನ್ನು ಹೆಸರಿಸಲಾಯಿತು.
|