ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ನೆಲೆಗಳ ಮೇಲೆ ಶ್ರೀಲಂಕಾ ಬಾಂಬ್ ದಾಳಿ
ಶ್ರೀಲಂಕಾದ ಯುದ್ಧವಿಮಾನಗಳು ಬುಧವಾರ ತಮಿಳು ವ್ಯಾಘ್ರಪಡೆಯ ಉನ್ನತ ನಾಯಕನ ನೆಲೆಯ ಮೇಲೆ ಬಾಂಬ್ ದಾಳಿ ಮಾಡಿವೆ ಮತ್ತು ಭೂದಾಳಿಯಲ್ಲಿ ಕನಿಷ್ಠ ಇಬ್ಬರು ಉಗ್ರರು ಹತರಾಗಿದ್ದಾರೆ.

ಇರ್ನಾಮಡು ಬಳಿ ಎಲ್‌ಟಿಟಿಇ ನೆಲೆ ಮೇಲೆ ಶ್ರೀಲಂಕಾ ವಿಮಾನಗಳು ಬಾಂಬ್ ದಾಳಿ ನಡೆಸಿದವು. ಆ ಪ್ರದೇಶದಲ್ಲಿ ವಾಯುನೆಲೆಯನ್ನು ಕೂಡ ಉಗ್ರರು ಹೊಂದಿದ್ದರು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಸಾವು, ನೋವಿನ ಬಗ್ಗೆ ಯಾವುದೇ ವಿವರಗಳನ್ನು ಅವರು ನೀಡಲಿಲ್ಲ. ಬಂಡುಕೋರರ ಹಿಡಿತದ ಪ್ರದೇಶದ ಮೇಲೆ ಮುಂಚಿನ ವಾಯುದಾಳಿಗಳಲ್ಲಿ ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಅವರು ಸತ್ತಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಶ್ರೀಲಂಕಾ ಮಿಲಿಟರಿ ಈಗಾಗಲೇ ಹೇಳಿದೆ. ಈ ಬಗ್ಗೆ ಎಲ್‌ಟಿಟಿಇ ಯಾವ ಪ್ರತಿಕ್ರಿಯೆಯನ್ನೂ ನೀಡದೇ ಪ್ರಭಾಕರನ್ ತಮ್ಮ ಹೋರಾಟಗಾರರ ಜತೆ ಸಭೆಯಲ್ಲಿರುವ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

ಈ ತಿಂಗಳಾರಂಭದಿಂದ ಸರ್ಕಾರಿ ಪಡೆಗಳು 594 ಬಂಡುಕೋರರನ್ನು ಕೊಂದಿರುವುದಾಗಿ ಮತ್ತು ತಮ್ಮ ಕಡೆ 26 ಸೈನಿಕರು ಸತ್ತಿರುವುದಾಗಿ ಶ್ರೀಲಂಕಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಶ್ರೀಲಂಕಾ ಅಧ್ಯಕ್ಷ ಮಹೀಂದ್ರ ರಾಜಪಕ್ಷೆ ಎಲ್‌ಟಿಟಿಇ ಜತೆ ಕದನವಿರಾಮ ಒಪ್ಪಂದವನ್ನು ಹಿಂತೆಗೆದುಕೊಂಡ ನಿರ್ಧಾರವನ್ನು ಸಮರ್ಥಿಸಿಕೊಂಡ ಮರುದಿನವೇ ಈ ವರದಿ ಪ್ರಕಟವಾಗಿದೆ. ಆದರೆ ಉಗ್ರರ ವಶದಲ್ಲಿರುವ ಪ್ರದೇಶದಲ್ಲಿ ದಾಳಿ ಮಾಡುವ ಯೋಜನೆಯಿಲ್ಲವೆಂದು ಅವರು ಬಹಿರಂಗಮಾಡಿದ್ದಾರೆ.

ತಮಿಳು ಪ್ರತ್ಯೇಕತಾವಾದಿ ಆಂದೋಳನಕ್ಕೆ ಮಿಲಿಟರಿ ಪರಿಹಾರದ ಬಗ್ಗೆ ತಮಗೆ ನಂಬಿಕೆಯಿಲ್ಲವೆಂದು ಅವರು ಹೇಳಿದ್ದು, ಆದರೆ ಎಲ್‌ಟಿಟಿಇ ತಮ್ಮ ಸಶಸ್ತ್ರ ಹೋರಾಟ ನಿಲ್ಲಿಸುವ ತನಕ ಅದರ ಜತೆ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು
ಆಸ್ಟ್ರೇಲಿಯ ಪರಿಹಾರ ನೀಡಿದರೆ ಋಣಿ: ಹನೀಫ್
ಹಾಲಿವುಡ್ ಚಿತ್ರನಟ ಹೆತ್ ಲೆಡ್ಜರ್ ದುರಂತ ಮರಣ
ಲಂಡನ್ ಶಾಲೆಗಳಲ್ಲಿ ಲೋಹಶೋಧಕ ಯಂತ್ರ
ಹತ್ಯೆಯ ಬಗ್ಗೆ ಬೇನಜೀರ್‌ಗೆ ಮುನ್ಸೂಚನೆ
ಅಪ್ಪ ಭಯೋತ್ಪಾದಕ, ಮಗನಿಂದ ಶಾಂತಿಮಂತ್ರ
ಲಕ್ಷ್ಮಿ ಮಿಟ್ಟಲ್‌ಗೆ ಫ್ರೆಂಚ್ ಅಧ್ಯಕ್ಷರ ಬುಲಾವ್