ಪ್ಯಾಲೆಸ್ತೀನಿಯರ ವಿರುದ್ಧ ಇಸ್ರೇಲಿನ ಆಕ್ರಮಣಕಾರಿ ಕ್ರಮಗಳ ವಿರುದ್ಧ ಪಾಕಿಸ್ತಾನ ಗುರುವಾರ ಖಂಡನೆ ವ್ಯಕ್ತಪಡಿಸಿದೆ. ಗಾಜಾ ಪ್ರದೇಶದಲ್ಲಿ ಇಸ್ರೇಲಿನ ದಿಗ್ಬಂಧನವನ್ನು ಸಂಪೂರ್ಣವಾಗಿ ತೆಗೆಯುವುದನ್ನು ಖಾತ್ರಿ ಮಾಡಿಕೊಳ್ಳುವಂತೆ ವಿಶ್ವ ಸಮುದಾಯಕ್ಕೆ ಅದು ಕರೆ ನೀಡಿದೆ. ವಿದೇಶಿ ಕಚೇರಿ ವಕ್ತಾರ ಮುಹಮ್ಮದ್ ಸಾದಿಖ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಸಂಕಷ್ಟಪೀಡಿತ ಪ್ಯಾಲೆಸ್ತೀನಿಯರಿಗೆ ಇಂಧನ, ಆಹಾರ ಮತ್ತು ಮಾನವೀಯ ನೆರವುಗಳನ್ನು ತಕ್ಷಣವೇ ನೀಡುವುದನ್ನು ಖಚಿತಮಾಡಿಕೊಳ್ಳುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ತಿಳಿಸಿದರು.
ಗಾಜಾದ ಹದಗೆಟ್ಟ ಪರಿಸ್ಥಿತಿಯ ಬಗ್ಗೆ ಪಾಕಿಸ್ತಾನ ತೀವ್ರ ಕಳವಳಕ್ಕೀಡಾಗಿದೆ ಎಂದು ಅವರು ನುಡಿದಿದ್ದಾರೆ. ಈ ಅತಿರೇಕದ ಕ್ರಮಗಳು ಅಂತಾರಾಷ್ಟ್ರೀಯ ನಿಯಮಗಳು ಮತ್ತು ಮಾನವೀಯತೆ ಕಾನೂನು ಉಲ್ಲಂಘನೆ ಎಂದು ಅವರು ನುಡಿದರು.
ಪ್ಯಾಲೆಸ್ತೀನ್ ವಿಷಯವನ್ನು ವಿಶ್ವಸಂಸ್ಥೆ ನಿರ್ಣಯಗಳು, ಅರಬ್ ಶಾಂತಿ ಯೋಜನೆ ಮತ್ತು ಅಂತಾರಾಷ್ಟ್ರೀಯ ಶಾಂತಿ ಯತ್ನಗಳ ಪ್ರಕಾರ ಪರಿಹರಿಸುವಂತೆ ಪಾಕಿಸ್ತಾನ ಕರೆ ನೀಡಿರುವುದಾಗಿ ಅವರು ಹೇಳಿದರು.
|