ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌ಟಿಟಿಇ ನೆಲೆ ಮೇಲೆ ವಾಯುಪಡೆ ದಾಳಿ
PTI
ಎಲ್‌ಟಿಟಿಇ ವರಿಷ್ಠ ಪ್ರಭಾಕರನ್ ಆಗಾಗ್ಗೆ ಭೇಟಿ ನೀಡುವ ಕಿಲ್ಲಿನೋಚಿಯ ಮುಖ್ಯ ನೆಲೆ ಮೇಲೆ ಶ್ರೀಲಂಕಾ ವಾಯುಪಡೆ ಜೆಟ್ ವಿಮಾನಗಳು ಬುಧವಾರ ದಾಳಿ ನಡೆಸಿದ್ದರಿಂದ ಪ್ರಭಾಕರನ್ ಕೂದಲೆಳೆಯ ಅಂತರದಲ್ಲಿ ಪಾರಾಗಿರಬಹುದೆಂದು ಭಾವಿಸಲಾಗಿದೆ. ಶ್ರೀಲಂಕಾದ ವಾಯುದಾಳಿಗೆ 15 ನಿಮಿಷಗಳಿಗೆ ಮುಂಚೆ ಪ್ರಭಾಕರನ್ ಈ ನೆಲೆಗೆ ಭೇಟಿ ನೀಡಿರಬಹುದೆಂದು ಶಂಕಿಸಲಾಗಿದೆ ಎಂದು ಐಟಿಎನ್ ಟಿವಿ ಜಾಲ ವರದಿ ಮಾಡಿದೆ.

ಈ ತಿಂಗಳಾರಂಭದಲ್ಲಿ ಕದನವಿರಾಮ ರದ್ದುಮಾಡಿದ ಬಳಿಕ ಎಲ್‌ಟಿಟಿಇ ನೆಲೆಗಳ ಮೇಲೆ ಆಕ್ರಮಣ ತೀವ್ರಗೊಳಿಸಿರುವ ಮಿಲಿಟರಿ ಕಲ್ಮಡುಕಲುಮ ಪ್ರದೇಶದ ಇರ್ನಮಡು ಕೆರೆಯ ಬಳಿಯಿರುವ ಎಕ್ಸ್ ರೆ ನೆಲೆ ಮೇಲೆ ಬಾಂಬ್ ದಾಳಿ ನಡೆಸಿತು. ಈ ನೆಲೆಗೆ ಪ್ರಭಾಕರನ್ ನಿಯಮಿತವಾಗಿ ಭೇಟಿ ನೀಡುತ್ತಿದ್ದರು ಎಂದು ವಾಯುಪಡೆ ವಕ್ತಾರ ವಿಂಗ್ ಕಮಾಂಡರ್ ಆಂಡಿ ವಿಜೆಸೋರಿಯ ತಿಳಿಸಿದರು.

ನೆಲೆಯ ಮೇಲೆ ನಿಖರವಾಗಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ಯುದ್ಧವಿಮಾನದ ಪೈಲಟ್‌ಗಳು ಖಚಿತಪಡಿಸಿದ್ದಾರೆ. ಎಲ್‌ಟಿಟಿಇ ನೆಲೆಯಲ್ಲಿ ನಡೆಯುತ್ತಿದ್ದ ವಿಶೇಷ ಚಟುವಟಿಕೆಗೆ ಹೊಂದಿಕೆಯಾಗುವಂತೆ ವಾಯುದಾಳಿ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ. ಆದಾಗ್ಯೂ, ಕಳೆದ ವರ್ಷ ಅನೇಕ ಹಿನ್ನಡೆಗಳನ್ನು ಅನುಭವಿಸಿದ ಪ್ರಭಾಕರನ್ ಗತಿ ಏನಾಯಿತೆಂಬ ಬಗ್ಗೆ ಅವರು ಏನನ್ನೂ ಹೇಳಲಿಲ್ಲ.
ಮತ್ತಷ್ಟು
ಇಸ್ರೇಲಿನ ಆಕ್ರಮಣಕಾರಿ ನೀತಿಗೆ ಪಾಕ್ ಖಂಡನೆ
ಈಜಿಪ್ಟಿನಲ್ಲಿ ಆಹಾರ ಖರೀದಿಗೆ ಪ್ಯಾಲೆಸ್ಟೈನ್ ದಂಡು
ಉಗ್ರರ ನೆಲೆಗಳ ಮೇಲೆ ಶ್ರೀಲಂಕಾ ಬಾಂಬ್ ದಾಳಿ
ಆಸ್ಟ್ರೇಲಿಯ ಪರಿಹಾರ ನೀಡಿದರೆ ಋಣಿ: ಹನೀಫ್
ಹಾಲಿವುಡ್ ಚಿತ್ರನಟ ಹೆತ್ ಲೆಡ್ಜರ್ ದುರಂತ ಮರಣ
ಲಂಡನ್ ಶಾಲೆಗಳಲ್ಲಿ ಲೋಹಶೋಧಕ ಯಂತ್ರ