ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೋಲೆಂಡ್ ವಿಮಾನ ಅಪಘಾತದಲ್ಲಿ 20 ಸಾವು
ಪೋಲೆಂಡ್‌ನ ಮಿರೋಸ್ಲಾವಿಕ್ ವಿಮಾನನಿಲ್ದಾಣಕ್ಕೆ ಇಳಿಯಲು ಸಜ್ಜಾಗಿದ್ದ ಪೋಲಿಷ್ ಈಡ್ಸ್ ಕಾಸಾ ಮಿಲಿಟರಿ ಸಾರಿಗೆ ವಿಮಾನವು ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಎಲ್ಲ 20 ಜನರೂ ಅಸುನೀಗಿದ್ದಾರೆಂದು ಪೋಲೆಂಡ್ ವಾಯುಪಡೆ ಗುರುವಾರ ತಿಳಿಸಿದೆ.

ಬುಧವಾರ ತಡರಾತ್ರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ವಿಮಾನಿಲ್ದಾಣದ ವಕ್ತಾರ ತಿಳಿಸಿದ್ದಾರೆ. ವಿಮಾನದಲ್ಲಿ 15 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಸೇರಿದಂತೆ 19 ಮಿಲಿಟರಿ ಸಿಬ್ಬಂದಿ ಕುಳಿತಿದ್ದರು ಎಂದು ವಾಯುಪಡೆಯ ವಕ್ತಾರರೊಬ್ಬರು ತಿಳಿಸಿದರು.

ಸ್ಪೇನ್ ನಿರ್ಮಿತ ವಿಮಾನವು ಮಿರೋಸ್ಲೋವಿಕ್ ಸಮೀಪಿಸುತ್ತಿದ್ದಂತೆ ರನ್‌ವೇಗೆ ಹತ್ತಿರದಲ್ಲಿ ಮರಗಳ ಮೇಲೆ ಅಪಘಾತಕ್ಕೀಡಾಗಿ ಬೆಂಕಿ ಆವರಿಸಿತೆಂದು ತಿಳಿದುಬಂದಿದೆ.
ಪೋಲೆಂಡ್ ವಾಯುಪಡೆ ಆಯೋಜಿಸಿದ್ದ ವಾಯುಪ್ರಯಾಣದ ಭದ್ರತೆ ಕುರಿತ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿ ವಾರ್ಸಾದಿಂದ ವಾಪಸಾಗುತ್ತಿದ್ದಂತೆ ವಿಮಾನ ಅಪಘಾತ್ಕಕೀಡಾಗಿದ್ದು ಕಾಕತಾಳೀಯ.
ಮತ್ತಷ್ಟು
ಎಲ್‌ಟಿಟಿಇ ನೆಲೆ ಮೇಲೆ ವಾಯುಪಡೆ ದಾಳಿ
ಇಸ್ರೇಲಿನ ಆಕ್ರಮಣಕಾರಿ ನೀತಿಗೆ ಪಾಕ್ ಖಂಡನೆ
ಈಜಿಪ್ಟಿನಲ್ಲಿ ಆಹಾರ ಖರೀದಿಗೆ ಪ್ಯಾಲೆಸ್ಟೈನ್ ದಂಡು
ಉಗ್ರರ ನೆಲೆಗಳ ಮೇಲೆ ಶ್ರೀಲಂಕಾ ಬಾಂಬ್ ದಾಳಿ
ಆಸ್ಟ್ರೇಲಿಯ ಪರಿಹಾರ ನೀಡಿದರೆ ಋಣಿ: ಹನೀಫ್
ಹಾಲಿವುಡ್ ಚಿತ್ರನಟ ಹೆತ್ ಲೆಡ್ಜರ್ ದುರಂತ ಮರಣ