ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಷ್ಯಾ ಜತೆ ಶೀತಲಯುದ್ಧ ಅಸಂಬದ್ಧ: ರೈಸ್
PTI
ರಷ್ಯಾ ಜತೆ ಹೊಸ ಶೀತಲ ಯುದ್ಧದ ಬಗ್ಗೆ ಎದ್ದಿರುವ ಊಹಾಪೋಹಗಳು ಅಸಂಬದ್ಧ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಂಡೋಲೀಜಾ ರೈಸ್ ಅಭಿಪ್ರಾಯಪಟ್ಟಿದ್ದು, ಜಾಗತಿಕ ವಿಷಯಗಳ ಬಗ್ಗೆ ಮಾಸ್ಕೊ ಜತೆ ಕೆಲಸ ಮಾಡಲು ಅಮೆರಿಕ ಬದ್ಧವಾಗಿದೆ ಎಂದು ಹೇಳಿದ್ದಾರೆ.

ವಿಶ್ವ ಆರ್ಥಿಕ ವೇದಿಕೆಯಲ್ಲಿ ಬುಧವಾರ ಮಾತನಾಡುತ್ತಿದ್ದ ಅವರು, ಅಂತಾರಾಷ್ಟ್ರೀಯ ತೈಲ ಬೆಲೆಗಳು ಬ್ಯಾರಲ್‌ಗೆ 90 ಡಾಲರ್ ಆಸುಪಾಸಿನಲ್ಲಿರುವ ನಡುವೆ, ಜಾಗತಿಕ ಇಂಧನದ ಬೇಡಿಕೆಗಳನ್ನು ಪೂರೈಸಲು ಜವಾಬ್ದಾರಿಯನ್ನು ನಿರ್ವಹಿಸುವಂತೆ ಅವರು ರಷ್ಯಾದ ನಾಯಕತ್ವಕ್ಕೆ ತಿಳಿಸಿದರು.ರಷ್ಯಾ ಪಾರದರ್ಶಕ ಮತ್ತು ಮುಕ್ತ ಜಾಗತಿಕ ಇಂಧನ ಆರ್ಥಿಕತೆಗೆ ಕೊಡುಗೆ ನೀಡಬೇಕೇ ಹೊರತು ಏಕಸ್ವಾಮ್ಯ ಅನುಸರಿಸಬಾರದು ಎಂದು ನುಡಿದರು.

ವಿಯೆಟ್ನಾಂ, ಲಿಬ್ಯಾ ಮತ್ತಿತರ ರಾಷ್ಟ್ರಗಳ ಜತೆ ಅಮೆರಿಕದ ಸಂಬಂಧದಲ್ಲಿ ಸುಧಾರಣೆ ಕುರಿತು ಉಲ್ಲೇಖಿಸಿದ ಅವರು ಅಮೆರಿಕಕ್ಕೆ ಯಾರೇ ಕಾಯಂ ಶತ್ರುಗಳಿಲ್ಲ. ರಷ್ಯಾ ಜತೆ ಕೂಡ ಅಮೆರಿಕ ಅದೇ ನಿಲುವನ್ನು ಹೊಂದಿದೆ ಎಂದು ರೈಸ್ ಹೇಳಿದರು.

ಅಮೆರಿಕ ಮತ್ತು ರಷ್ಯಾ ರಚನಾತ್ಮಕವಾಗಿ ಅಣ್ವಸ್ತ್ರ ಪ್ರಸರಣ ನಿಷೇಧದಿಂದ ಹಿಡಿದು ಭಯೋತ್ಪಾದನೆ ನಿಗ್ರಹ ಮತ್ತು ಮಧ್ಯಪೂರ್ವದಲ್ಲಿ ಶಾಂತಿಯತ್ನ ಮುಂತಾದ ವಿಷಯಗಳತ್ತ ಕಾರ್ಯೋನ್ಮುಖವಾಗಿವೆ ಎಂದು ನುಡಿದರು.
ಮತ್ತಷ್ಟು
ಪೋಲೆಂಡ್ ವಿಮಾನ ಅಪಘಾತದಲ್ಲಿ 20 ಸಾವು
ಎಲ್‌ಟಿಟಿಇ ನೆಲೆ ಮೇಲೆ ವಾಯುಪಡೆ ದಾಳಿ
ಇಸ್ರೇಲಿನ ಆಕ್ರಮಣಕಾರಿ ನೀತಿಗೆ ಪಾಕ್ ಖಂಡನೆ
ಈಜಿಪ್ಟಿನಲ್ಲಿ ಆಹಾರ ಖರೀದಿಗೆ ಪ್ಯಾಲೆಸ್ಟೈನ್ ದಂಡು
ಉಗ್ರರ ನೆಲೆಗಳ ಮೇಲೆ ಶ್ರೀಲಂಕಾ ಬಾಂಬ್ ದಾಳಿ
ಆಸ್ಟ್ರೇಲಿಯ ಪರಿಹಾರ ನೀಡಿದರೆ ಋಣಿ: ಹನೀಫ್