ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿದ್ರೆ ಮಾತ್ರೆ ಲೆಡ್ಜರ್ ಸಾವಿಗೆ ಕಾರಣವೇ?
ಮೃತರಾದ ಹಾಲಿವುಡ್ ನಟ ಹೆತ್ ಲೆಡ್ಜರ್ ಅವರು ಆಂಬಿಯಾನ್ ನಿದ್ರೆ ಮಾತ್ರೆ ಸೇವಿಸಿದ್ದಾರೆಂಬ ವರದಿಗಳ ನಡುವೆ ಆಂಬಿಯಾನ್ ನಿದ್ರೆ ಗುಳಿಗೆಗಳನ್ನು ತಾವು ಕೂಡ ಸೇವಿಸಿ ಸಾವಿನಿಂದ ಪಾರಾದ ಘಟನೆಯನ್ನು ಅಮೆರಿಕದ ನಟ ಜಾಕ್ ನಿಕಲ್‌ಸನ್ ಬಯಲುಮಾಡಿದ್ದಾರೆ.

ಹಲವಾರು ವರ್ಷಗಳ ಹಿಂದೆ ಆಂಬಿಯನ್ ನಿದ್ರೆ ಗುಳಿಗೆಗಳನ್ನು ತಾವು ಸೇವಿಸಿದ್ದನ್ನು ಮತ್ತು ಅದರ ಅನುಭವದಿಂದ ತಲ್ಲಣಿಸಿದ್ದಾಗಿ ಅವರು ಹೇಳಿದ್ದಾರೆ. ಆ ಔಷಧಿಯನ್ನು ಸೇವಿಸದಂತೆ ತಮ್ಮ ಸಂಗಡಿಗರಿಗೆ ಕೂಡ ಅವರು ಹೇಳುತ್ತಿದ್ದರು.

ಮಂಗಳವಾರ ಮಧ್ಯಾಹ್ನ ನ್ಯೂಯಾರ್ಕ್‌ನ ತಮ್ಮ ನಿವಾಸದ ಮಲಗುವ ಕೋಣೆಯಲ್ಲಿ ಆಸ್ಟ್ರೇಲಿಯದ ನಟ ಲೆಡ್ಜರ್ ಸತ್ತುಬಿದ್ದಿರುವುದು ಪತ್ತೆಯಾಗಿತ್ತು. ಅವರ ಸಾವು ಹೇಗೆ ಉಂಟಾಯಿತೆಂದು ಅವರ ಶವಪರೀಕ್ಷೆಯಿಂದ ದೃಢಪಟ್ಟಿರಲಿಲ್ಲ. ಅವರ ಹಾಸಿಗೆಯ ಬಳಿ ನಿದ್ರೆಮಾತ್ರೆಗಳು ಪತ್ತೆಯಾಗಿರುವುದರಿಂದ ಅವರ ಸಾವು ಔಷಧಿ ಸಂಬಂಧಿತ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು
ರಷ್ಯಾ ಜತೆ ಶೀತಲಯುದ್ಧ ಅಸಂಬದ್ಧ: ರೈಸ್
ಪೋಲೆಂಡ್ ವಿಮಾನ ಅಪಘಾತದಲ್ಲಿ 20 ಸಾವು
ಎಲ್‌ಟಿಟಿಇ ನೆಲೆ ಮೇಲೆ ವಾಯುಪಡೆ ದಾಳಿ
ಇಸ್ರೇಲಿನ ಆಕ್ರಮಣಕಾರಿ ನೀತಿಗೆ ಪಾಕ್ ಖಂಡನೆ
ಈಜಿಪ್ಟಿನಲ್ಲಿ ಆಹಾರ ಖರೀದಿಗೆ ಪ್ಯಾಲೆಸ್ಟೈನ್ ದಂಡು
ಉಗ್ರರ ನೆಲೆಗಳ ಮೇಲೆ ಶ್ರೀಲಂಕಾ ಬಾಂಬ್ ದಾಳಿ