ಶ್ವೇತಭವನವನ್ನು ತೊರೆಯುವ ಮುಂಚೆ ಅಣ್ವಸ್ತ್ರ ಪ್ರಸರಣವನ್ನು ನಿಗ್ರಹಿಸುವ ಅಮೆರಿಕದ ಅಧ್ಯಕ್ಷ ಬುಷ್ ಆಂದೋಳನವು ನಿರಾಶೆಯ ಮುಕ್ತಾಯವನ್ನು ಕಾಣುತ್ತಿದ್ದು, ಫಲ ನೀಡುತ್ತಿಲ್ಲ. ಬುಷ್ ಕಾರ್ಯತಂತ್ರ ವಿಫಲವಾಗಿದೆ ಎನ್ನುವುದು ಎಲ್ಲರಿಗೂ ಸ್ಪಷ್ಟವಾಗಿದೆ. ಈ ಗೊಂದಲದಿಂದ ಪಾರಾಗಲು ಅವರು ತಕ್ಷಣವೇ ಹೊಂದಾಣಿಕೆ ಮಾಡಿಕೊಳ್ಳುವರೇ ಎನ್ನುವುದೇ ಈಗ ಪ್ರಶ್ನೆಯಾಗಿದೆ ಎಂದು ಅಮೆರಿಕನ್ ಪ್ರೋಗ್ರೆಸ್ ಕೇಂದ್ರ ಚಿಂತಕರ ಚಾವಡಿಯ ಪರಮಾಣು ತಜ್ಞ ಜೋಸೆಫ್ ಸಿರಿನ್‌ಸಿಯೋನ್ ತಿಳಿಸಿದ್ದಾರೆ.
ಬುಷ್ ಮಾತುಕತೆಗೆ ಒತ್ತುನೀಡುವ ತನಕ ಉತ್ತರ ಕೊರಿಯದ ಬಗ್ಗೆ ನಾವು ಆಶಾವಾದ ತಾಳಿದ್ದೇವೆ ಎಂದು ಸಿರಿನ್‌ಸಿಯೋನ್ ಸಂದರ್ಶನದಲ್ಲಿ ಹೇಳಿದ್ದಾರೆ. ಇರಾನ್‌ನಲ್ಲಿ ತುಂಬ ಕಷ್ಟದ ಪರಿಸ್ಥಿತಿಯಿದೆ.
ಅಧ್ಯಕ್ಷರು ತಮ್ಮ ಸಂಘರ್ಷದ ಮನೋಭಾವ ತ್ಯಜಿಸಿ ಇರಾನ್‌ನನ್ನು ನೇರವಾಗಿ ಮಾತುಕತೆಗೆ ಎಳೆಯಲು ಇಷ್ಟಪಡುತ್ತಿಲ್ಲ ಎಂದು ಅವರು ನುಡಿದರು. ಬುಷ್ ಆಡಳಿತದ ಬೆಂಬಲದೊಂದಿಗೆ ಈ ಮಾರ್ಗದಲ್ಲಿ ಮಾತುಕತೆಗೆ ಯೂರೋಪಿಯನ್ನರು ಪ್ರಯತ್ನಿಸಿದರು. ಆದರೆ ಅಧ್ಯಕ್ಷರು ಟೆಹರಾನ್ ಜತೆ ನೇರ ಪರಮಾಣು ಮಾತುಕತೆಗೆ ನಿರಾಕರಿಸಿದ್ದಾರೆ.
|