ವಾಸ ಮತ್ತು ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿದ 260ಕ್ಕೂ ಹೆಚ್ಚು ಭಾರತೀಯ ಪೌರರನ್ನು ಶಾರ್ಜಾದಲ್ಲಿ ಬಂಧಿಸಲಾಗಿದೆ. ಯುಎಇಯಲ್ಲಿ ಅಧಿಕೃತ ಕ್ಷಮಾದಾನವು ಕಳೆದ ವರ್ಷ ಮುಕ್ತಾಯವಾಗಿದ್ದು, ಆ ಸಂದರ್ಭದಲ್ಲಿ ಸುಮಾರು 3 ಲಕ್ಷ ಜನರು ಜನರು ತಮ್ಮ ಅಕ್ರಮವಾಸವನ್ನು ಸಕ್ರಮಗೊಳಿಸಿದ್ದಾರೆ.
ಕೆಲವರ ಬಳಿ ವಾಸದ ವೀಸಾಗಳಿದ್ದು, ಅನೇಕ ವರ್ಷಗಳ ಹಿಂದೆ ಅದರ ಮಾನ್ಯತೆ ಮುಗಿದುಹೋಗಿದ್ದು ನವೀಕರಣ ಮಾಡಿಸಿರಲಿಲ್ಲ. ಬಂಧಿತರಲ್ಲಿ ಕೆಲವರು ಪ್ರಾಯೋಜಕರನ್ನು ಹೊರತುಪಡಿಸಿ ಬೇರೆ ಜನರ ಜತೆ ಕೆಲಸ ಮಾಡುತ್ತಿದ್ದರು ಎಂದು ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಕ್ಷಮಾದಾನ ಅವಧಿ ಮುಗಿದಿರುವುದರಿಂದ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ದಂಡಗಳನ್ನು ವಿಧಿಸುವುದಾಗಿ ಅಧಿಕಾರಿ ಎಚ್ಚರಿಸಿದ್ದಾರೆ. ಕೆಲವು ಅಕ್ರಮ ವಲಸಿಗರು ಶಾರ್ಜಾದ ವಿವಿಧ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆಂದು ಪೊಲೀಸರಿಗೆ ಮಾಹಿತಿ ಸಿಕ್ಕಿದ ಬಳಿಕ ದಾಳಿಗಳನ್ನು ಯೋಜಿಸಲಾಗಿದೆ.
|