ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ನೆರವು ಕೋರಿದರೆ ಅಮೆರಿಕ ಸಿದ್ಧ
ಭಯೋತ್ಪಾದನೆ ವಿರುದ್ಧ ಹೋರಾಡಲು ಇಸ್ಲಾಮಾಬಾದ್ ನೆರವಿಗಾಗಿ ಕೋರಿದರೆ ಅಮೆರಿಕದ ಸಣ್ಣ ತುಕಡಿಯನ್ನು ಕಳಿಸಲು ಬುಷ್ ಆಡಳಿತ ಸಿದ್ಧವಿದೆ ಎಂದು ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ತಿಳಿಸಿದ್ದಾರೆ. ಪಾಕಿಸ್ತಾನ ಇಚ್ಛಿಸಿದರೆ ನಾವು ಜಂಟಿ ಕಾರ್ಯಾಚರಣೆಗೆ ಹೆಚ್ಚುವರಿ ತರಬೇತಿ ನೀಡುವುದಕ್ಕೆ ಅವರ ಜತೆ ಸಹಭಾಗಿತ್ವ ಹೊಂದಲು ಮತ್ತು ನೆರವು ನೀಡಲು ಬಯಸುತ್ತೇವೆ ಎಂದು ಅಡ್ಮೈರಲ್ ಮೈಕ್ ಮುಲ್ಲೆನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹೆಚ್ಚು ಸಕ್ರಿಯರಾಗಿರುವ ಬಂಡುಕೋರರ ವಿರುದ್ಧ ಪಾಕಿಸ್ತಾನ ಹೋರಾಡುತ್ತಿದ್ದರೂ ಅವರು ಹೆಚ್ಚುವರಿ ಸಹಾಯಕ್ಕೆ ಮನವಿ ಸಲ್ಲಿಸಿಲ್ಲ ಎಂದು ಪೆಂಟಗಾನ್ ಉನ್ನತಾಧಿಕಾರಿ ತಿಳಿಸಿದ್ದು, ಸಮಸ್ಯೆ ಹೇಗೆ ನಿಭಾಯಿಸಬೇಕೆಂಬ ಮುಷರ್ರಫ್ ಸರ್ಕಾರದ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಎಂದು ನುಡಿದರು.

ಈ ಹಂತದಲ್ಲಿ ಯಾವುದೇ ಪ್ರಸ್ತಾವನೆಗಳನ್ನು ಪಾಕಿಸ್ತಾನಿಯರು ಮಂಡಿಸಿದ ಬಗ್ಗೆ ನಮಗೆ ಅರಿವಿಲ್ಲ. ಅವರಿಂದ ನಾವು ಪ್ರಸ್ತಾವನೆಗಳು ಅಥವಾ ಸಲಹೆಗಳಿಗಾಗಿ ಕಾಯುತ್ತಿದ್ದೇವೆ ಎಂದು ರಕ್ಷಣಾ ಕಾರ್ಯದರ್ಶಿ ಹೇಳಿದರು.

ಪಾಕಿಸ್ತಾನದಲ್ಲಿ ಭದ್ರತೆಯ ಸವಾಲು ಬೇನಜೀರ್ ಭುಟ್ಟೊ ಅವರ ದುರಂತ ಹತ್ಯೆಯಿಂದ ಉದ್ಭವಿಸಿದೆ. ಆದ್ದರಿಂದ ಈ ಬಗ್ಗೆ ಹೇಗೆ ಮುನ್ನಡೆಯಬೇಕೆಂದು ಮತ್ತು ಕಾರ್ಯತಂತ್ರವನ್ನು ಮುನ್ನಡೆಸುವುದು ಹೇಗೆಂದು ಅವರು ಪೂರ್ಣವಾಗಿ ಯೋಚಿಸಿಲ್ಲ ಎಂದು ಗೇಟ್ಸ್ ಹೇಳಿದ್ದಾರೆ.
ಮತ್ತಷ್ಟು
ಶಾರ್ಜಾದಲ್ಲಿ 260 ಭಾರತೀಯ ಪೌರರ ಬಂಧನ
ಅಣ್ವಸ್ತ್ರ ಪ್ರಸರಣ ವಿರುದ್ಧ ಆಂದೋಳನ ನಿಷ್ಫಲ
ನಿದ್ರೆ ಮಾತ್ರೆ ಲೆಡ್ಜರ್ ಸಾವಿಗೆ ಕಾರಣವೇ?
ರಷ್ಯಾ ಜತೆ ಶೀತಲಯುದ್ಧ ಅಸಂಬದ್ಧ: ರೈಸ್
ಪೋಲೆಂಡ್ ವಿಮಾನ ಅಪಘಾತದಲ್ಲಿ 20 ಸಾವು
ಎಲ್‌ಟಿಟಿಇ ನೆಲೆ ಮೇಲೆ ವಾಯುಪಡೆ ದಾಳಿ