ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಂತರಿಕ ವಿಷಯಗಳಲ್ಲಿ ಹಸ್ತಕ್ಷೇಪವಿಲ್ಲ
ಭಾರತ ಶ್ರೀಲಂಕಾದಲ್ಲಿನ ಘರ್ಷಣೆಯಲ್ಲಿ ಯಾವುದೇ ಸೇನಾ ಪಾತ್ರವನ್ನು ವಹಿಸುವುದಿಲ್ಲ ಎಂದು ಅಮೆರಿಕದ ಶ್ರೀಲಂಕಾ ರಾಜಭಾರಿ ತಿಳಿಸಿದ್ದಾರೆ ಮತ್ತು ರಾಜಕೀಯ ಪರಿಸ್ಥಿತಿಯಲ್ಲಿನ ನವ ದೆಹಲಿಯ ಪಾತ್ರವನ್ನು ಶ್ಲಾಘಿಸಿದ್ದಾರೆ.

ಪ್ರಸಕ್ತ ಸೇನಾ ಅಭಿಯಾನದಲ್ಲಿ ಭಾರತ ಯಾವುದೇ ಪಾತ್ರ ವಹಿಸುತ್ತಿಲ್ಲ ಆದರೆ ರಾಜಕೀಯ ಸನ್ನಿವೇಶದಲ್ಲಿ ಭಾರತ ಅತ್ಯಂತ ಸಕಾರಾತ್ಮಕ ಪಾತ್ರ ವಹಿಸುತ್ತಿದ್ದು, ಈ ಬಗ್ಗೆ ತಾವು ಬಹಳ ಕೃತಜ್ಞರಾಗಿದ್ದೇವೆ ಎಂದು ರಾಜಭಾರಿ ಬೆರ್ನಾರ್ಡ್ ಗೂನೆತಿಲೆಕೆ ತಿಳಿಸಿದ್ದಾರೆ.

"ಕದನ ವಿರಾಮ ಒಪ್ಪಂದ, ಶಾಂತಿ ಪ್ರಕ್ರಿಯೆ ಮತ್ತು ಅಂತಾರಾಷ್ಟ್ರೀಯ ಸಮುದಾಯ" ಎಂಬುದರ ಮೇಲಿನ ಚರ್ಚಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಸಂಬಂಧಿಸಿದಂತೆ ತಮ್ಮ ಬೇಡಿಕೆಯನ್ನು ಎಲ್‌ಟಿಟಿಇ ತ್ಯಜಿಸುವವರೆಗೆ ಶ್ರೀಲಂಕಾ ಸರಕಾರ ಬಂಡುಕೋರರ ಜತೆ ಚರ್ಚೆ ನಡೆಸುವುದಿಲ್ಲ ಎಂದು ರಾಜಭಾರಿ ಸ್ಪಷ್ಟಪಡಿಸಿದ್ದಾರೆ.

ಪ್ರತ್ಯೇಕ ರಾಜ್ಯ ರಚನೆಗಾಗಿನ ಎಲ್‌ಟಿಟಿಇ ಬೇಡಿಕೆ ಮಾತುಕತೆಗೆ ಅನರ್ಹವಾಗಿದ್ದು, ಅವರೊಂದಿಗೆ ಯಾವ ವಿಷಯದ ಮೇಲೆ ಮಾತುಕತೆ ನಡೆಸಬೇಕು ಎಂದು ಪ್ರಶ್ನಿಸಿದ ಬೆರ್ನಾರ್ಡ್ ಪ್ರಜಾಪ್ರಭುತ್ವದಡಿ ಆಯ್ಕೆಗೊಂಡ ಸರಕಾರ ಹೇಗೆ ತಾನೇ ತನ್ನ ಸಾರ್ವಭಾಮತ್ವ ಪ್ರದೇಶದ ಭಾಗವನ್ನು ಎಲ್‌ಟಿಟಿಇ ಯಂತಹ ಪ್ರಜಾಪ್ರಭುತ್ವ ಅಲ್ಲದ ಸಂಘಟನೆಗೆ ಒಪ್ಪಿಸಲು ಸಾಧ್ಯ ಎಂದು ಹೇಳಿದ್ದಾರೆ.
ಮತ್ತಷ್ಟು
ನಾಗರಿಕರ 16 ಹೂತಿರುವ ದೇಹಗಳು ಪತ್ತೆ
ಪಾಕ್ ನೆರವು ಕೋರಿದರೆ ಅಮೆರಿಕ ಸಿದ್ಧ
ಶಾರ್ಜಾದಲ್ಲಿ 260 ಭಾರತೀಯ ಪೌರರ ಬಂಧನ
ಅಣ್ವಸ್ತ್ರ ಪ್ರಸರಣ ವಿರುದ್ಧ ಆಂದೋಳನ ನಿಷ್ಫಲ
ನಿದ್ರೆ ಮಾತ್ರೆ ಲೆಡ್ಜರ್ ಸಾವಿಗೆ ಕಾರಣವೇ?
ರಷ್ಯಾ ಜತೆ ಶೀತಲಯುದ್ಧ ಅಸಂಬದ್ಧ: ರೈಸ್