ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಕ್ಷಿಣ ಕರೊಲಿನಾ: ಹಿಲರಿಗೆ ಸೋಲುಣಿಸಿದ ಒಬಾಮಾ
ಜನಾಂಗೀಯವಾಗಿ ಪ್ರಮುಖವಾಗಿ ಗಮನ ಸೆಳೆದಿದ್ದ ದಕ್ಷಿಣ ಕರೊಲಿನಾ ಪ್ರೈಮರಿ ಚುನಾವಣೆಗಳಲ್ಲಿ ಬಾರಕ್ ಒಬಾಮಾ ಅವರು ಹಿಲರಿ ಕ್ಲಿಂಟನ್ ವಿರುದ್ಧ ವಿಜಯ ಸಾಧಿಸಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆಗೆ ಮತ್ತಷ್ಟು ಕಾವು ತುಂಬಿದ್ದಾರೆ.

ಈ ಚುನಾವಣೆಯಲ್ಲಿ ಪ್ರದೇಶ, ಧರ್ಮ ಅಥವಾ ಲಿಂಗ ಮುಖ್ಯವಾಗುವುದಿಲ್ಲ ಎಂದು ಶನಿವಾರ ರಾತ್ರಿ ನಡೆದ ವಿಜಯೋತ್ಸವ ಸಮಾವೇಶದಲ್ಲಿ ಒಬಾಮಾ ನುಡಿದರು. ಇದು ಬಡವರು ಮತ್ತು ಶ್ರೀಮಂತರ ಅಥವಾ ಕರಿಯರು ಮತ್ತು ಬಿಳಿಯರ ನಡುವಣ ಸ್ಪರ್ಧೆಯೂ ಅಲ್ಲ. ಸ್ಪರ್ಧೆ ಇರುವುದೇನಿದ್ದರೂ ಭೂತಕಾಲ ಮತ್ತು ಭವಿಷ್ಯದ ನಡುವೆ ಎಂದವರು ಹೇಳಿದರು.

ಈ ಪ್ರದೇಶದಲ್ಲಿ ಅರ್ಧದಷ್ಟು ಕರಿಯ ಮತದಾರರಿದ್ದಾರೆ. ಇದೀಗ ಫೆ.5ರಂದು ಟೆನ್ನಿಸ್ಸೀ ಮತ್ತು ಇತರ ರಾಜ್ಯಗಳ ಚುನಾವಣೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇಯೋವಾ ಕಾಕಸಸ್‌ನಲ್ಲಿ ಜ.3ರಂದು ಜಯಿಸಿದ ಬಳಿಕ ಇದು ಒಬಾಮಾ ಅವರಿಗೆ ಮೊದಲ ವಿಜಯ. ನ್ಯೂಯಾರ್ಕ್ ಸೆನೆಟರ್ ಆಗಿರುವ ಹಿಲರಿ ಕ್ಲಿಂಟನ್ ಕೆಲವು ದಿನಗಳ ಹಿಂದೆ ನ್ಯೂಹ್ಯಾಂಪ್‌ಶೈರ್ ಪ್ರೈಮರಿ ಚುನಾವಣೆಯಲ್ಲಿ ಅಚ್ಚರಿಯ ಗೆಲುವು ಸಾಧಿಸಿದ್ದರು.

ಹಿಲರಿ ಅವರು ಅಮೆರಿಕ ಮೊದಲ ಮಹಿಳಾ ಅಧ್ಯಕ್ಷೆಯಾಗುವ ಕನಸು ಹೊತ್ತಿದ್ದರೆ, ಒಬಾಮಾ ಅವರು ಅಮೆರಿಕ ಅಧ್ಯಕ್ಷ ಪದವಿಗೇರುವ ಮೊದಲ ಕರಿಯ ಜನಾಂಗೀಯ ವ್ಯಕ್ತಿ ಎಂಬ ಹೆಗ್ಗಳಿಕೆ ಸಾಧಿಸುವ ಆಕಾಂಕ್ಷೆಯಲ್ಲಿದ್ದಾರೆ.
ಮತ್ತಷ್ಟು
ಅಂತರಿಕ ವಿಷಯಗಳಲ್ಲಿ ಹಸ್ತಕ್ಷೇಪವಿಲ್ಲ
ನಾಗರಿಕರ 16 ಹೂತಿರುವ ದೇಹಗಳು ಪತ್ತೆ
ಪಾಕ್ ನೆರವು ಕೋರಿದರೆ ಅಮೆರಿಕ ಸಿದ್ಧ
ಶಾರ್ಜಾದಲ್ಲಿ 260 ಭಾರತೀಯ ಪೌರರ ಬಂಧನ
ಅಣ್ವಸ್ತ್ರ ಪ್ರಸರಣ ವಿರುದ್ಧ ಆಂದೋಳನ ನಿಷ್ಫಲ
ನಿದ್ರೆ ಮಾತ್ರೆ ಲೆಡ್ಜರ್ ಸಾವಿಗೆ ಕಾರಣವೇ?