ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಡೋನೇಷ್ಯ ಮಾಜಿ ಅಧ್ಯಕ್ಷ ಸುಹಾರ್ತೋ ನಿಧನ
ಇಂಡೋನೇಷಿಯಾವನ್ನು 32 ವರ್ಷಗಳ ಕಾಲ ತಮ್ಮ ಹಿಡಿತದಲ್ಲಿ ಆಳಿದ್ದ ಮಾಜಿ ಅಧ್ಯಕ್ಷ ಹಾಜಿ ಮುಹಮ್ಮದ್ ಸುಹಾರ್ತೋ ನಿಧನರಾದರು ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಅನಾರೋಗ್ಯದಿಂದಾಗಿ ಸುಹಾರ್ತೋ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಸಾವನ್ನಪ್ಪಿದ್ದಾರೆ ಎಂದು ಮೇಜರ್ ಡಿಕಿ ಸೊಂಡಾನಿ ತಿಳಿಸಿದ್ದಾರೆ. ಇದೀಗ ಸುಹಾರ್ತೋ ಇದ್ದ ಆಸ್ಪತ್ರೆಯಲ್ಲಿ ಅವರ ಬಂಧುಗಳು ದುಃಖತಪ್ತರಾಗಿ ನೆರೆದಿದ್ದು, ವಿಶೇಷ ರಕ್ಷಣಾ ಪಡೆಯನ್ನು ಆಸ್ಪತ್ರೆಯ ಸುತ್ತ ಮುತ್ತ ನಿಯೋಜಿಸಲಾಗಿದೆ.

ಜ.4ರಿಂದ ಗಂಭೀರ ಪರಿಸ್ಥಿತಿಯಲ್ಲಿ ಜಕಾರ್ತಾ ಆಸ್ಪತ್ರೆಗೆ ದಾಖಲಾಗಿದ್ದ 86ರ ಹರೆಯದ ಸುಹಾರ್ತೋ, ಹೃದಯ, ಕಿಡ್ನಿ, ಶ್ವಾಸಕೋಶ ಸಮಸ್ಯೆಗಳಿಂದ ಬಳಲುತ್ತಿದ್ದರು. ವಿಶ್ವದ ಅತಿ ಹೆಚ್ಚು ಮುಸ್ಲಿಂ ಜನಸಾಂದ್ರತೆಯಿರುವ ರಾಷ್ಟ್ರದಲ್ಲಿ ಅಪಾರ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ಕೂಡಿಟ್ಟಿದ್ದಾರೆ ಎಂಬ ಆರೋಪಕ್ಕೊಳಗಾಗಿರುವ ಸುಹಾರ್ತೋ, 1998ರಲ್ಲಿ ಜನ ದಂಗೆ ಎದ್ದ ಕಾರಣ ಅಧಿಕಾರ ತ್ಯಾಗ ಮಾಡಬೇಕಾಗಿಬಂದಿತ್ತು.

1967ರಿಂದ ಅಧ್ಯಕ್ಷರಾಗಿದ್ದ ಅವರು ಆರ್ಥಿಕ ಸುಧಾರಣೆಗಳೊಂದಿಗೆ ಪಾಶ್ಚಾತ್ಯ ರಾಷ್ಟ್ರಗಳೊಂದಿಗೆ ಸಂಬಂಧ ವೃದ್ಧಿಗೆ ಶ್ರಮಿಸಿದ್ದರು. ಪ್ರಬಲ ಕಮ್ಯೂನಿಸ್ಟ್ ವಿರೋಧಿಯಾಗಿದ್ದ ಅವರ ಆಡಳಿತ ವೈಖರಿ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆ ಮಾಡಿದ್ದವು. ಹಲವಾರು ಮಂದಿಯ ಸಾವಿಗೂ ಕಾರಣರಾಗಿದ್ದರು ಎಂಬ ಆರೋಪ ಅವರ ಮೇಲಿದ್ದು, 1998ರಲ್ಲಿ ರಾಜಕೀಯ ಒತ್ತಡದಿಂದ ಅಧಿಕಾರ ತ್ಯಾಗದ ಬಳಿಕ, ಅಜ್ಞಾತವಾಗಿಯೇ ಉಳಿದಿದ್ದರು.
ಮತ್ತಷ್ಟು
ಮೆಹಸೂದ್ ಪದಚ್ಯುತಗೊಳಿಸಿದ ಮುಲ್ಲಾ ಒಮರ್
ವಿವಾದಿತ ಲೇಖನ: ಗಾಂಧಿ ಮೊಮ್ಮಗ ರಾಜೀನಾಮೆ
ದಕ್ಷಿಣ ಕರೊಲಿನಾ: ಹಿಲರಿಗೆ ಸೋಲುಣಿಸಿದ ಒಬಾಮಾ
ಅಂತರಿಕ ವಿಷಯಗಳಲ್ಲಿ ಹಸ್ತಕ್ಷೇಪವಿಲ್ಲ
ನಾಗರಿಕರ 16 ಹೂತಿರುವ ದೇಹಗಳು ಪತ್ತೆ
ಪಾಕ್ ನೆರವು ಕೋರಿದರೆ ಅಮೆರಿಕ ಸಿದ್ಧ