ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೇನೆಯಿಂದ ಭೀಕರ ಕದನ: 25 ಉಗ್ರರ ಸಾವು
ವಾಯವ್ಯ ಪಾಕಿಸ್ತಾನದಲ್ಲಿ ಉಗ್ರಗಾಮಿಗಳು ವಶಪಡಿಸಿಕೊಂಡಿದ್ದ ಮಹತ್ವದ ಸುರಂಗವನ್ನು ಭದ್ರತಾ ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಂಡು ಹೆಲಿಕಾಪ್ಟರ್ ಗನ್‌ಶಿಪ್ ಮತ್ತು ಫಿರಂಗಿದಳದ ನೆರವಿನಿಂದ ಕನಿಷ್ಠ 25 ತಾಲಿಬಾನ್ ಪರ ಉಗ್ರಗಾಮಿಗಳನ್ನು ಕೊಂದಿದ್ದಾರೆ.

ಭದ್ರತಾ ಪಡೆಗಳು ದಾರಾ ಅಡಾಮ್ ಖೇಲ್ ಪಟ್ಟಣದ ಬಳಿ ಉಗ್ರಗಾಮಿಗಳು ಅಪಹರಿಸಿದ ಮದ್ದುಗುಂಡುಗಳನ್ನು ಪತ್ತೆಹಚ್ಚಲು ಪ್ರಮುಖ ಕಾರ್ಯಾಚರಣೆ ಕೈಗೊಂಡ ಬಳಿಕ ಉಗ್ರಗಾಮಿಗಳು ಜಪಾನಿ ನಿರ್ಮಿತ ಕೋಹಾಟ್ ಸುರಂಗವನ್ನು ವಶಕ್ಕೆ ತೆಗೆದುಕೊಂಡರು. ಉಗ್ರಗಾಮಿಗಳು ಸುರಂಗಮಾರ್ಗವನ್ನು ಕೈವಶ ಮಾಡಿಕೊಂಡ ಬಳಿಕ ಕೋಹಾಟ್ ಮತ್ತು ಪೇಶಾವರದ ಮುಖ್ಯ ನಗರಗಳ ನಡುವೆ ಸಂಚಾರಕ್ಕೆ ತಡೆಯುಂಟಾಯಿತು.

ಸುರಂಗದ ಎರಡೂ ಬದಿಯಲ್ಲಿ ಅನೇಕ ವಾಹನಗಳ ಸಂಚಾರ ಸ್ಥಗಿತಗೊಂಡಿತು.ಉಗ್ರಗಾಮಿಗಳ ಜತೆ ಭೀಕರ ಕದನದ ಬಳಿಕ ಉಗ್ರಗಾಮಿಗಳು ಕೈವಶ ಮಾಡಿಕೊಂಡಿದ್ದ ಸುರಂಗವನ್ನು ಮುಕ್ತಗೊಳಿಸಿದರು.
ಮತ್ತಷ್ಟು
ಇಂಡೋನೇಷ್ಯ ಮಾಜಿ ಅಧ್ಯಕ್ಷ ಸುಹಾರ್ತೋ ನಿಧನ
ಮೆಹಸೂದ್ ಪದಚ್ಯುತಗೊಳಿಸಿದ ಮುಲ್ಲಾ ಒಮರ್
ವಿವಾದಿತ ಲೇಖನ: ಗಾಂಧಿ ಮೊಮ್ಮಗ ರಾಜೀನಾಮೆ
ದಕ್ಷಿಣ ಕರೊಲಿನಾ: ಹಿಲರಿಗೆ ಸೋಲುಣಿಸಿದ ಒಬಾಮಾ
ಅಂತರಿಕ ವಿಷಯಗಳಲ್ಲಿ ಹಸ್ತಕ್ಷೇಪವಿಲ್ಲ
ನಾಗರಿಕರ 16 ಹೂತಿರುವ ದೇಹಗಳು ಪತ್ತೆ