ಜೆಡ್ಡಾದಲ್ಲಿ ಹಿರಿಯ ಮಹಿಳೆಯ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯನೊಬ್ಬ ಸೇರಿದಂತೆ ಮೂವರು ದಕ್ಷಿಣ ಏಷ್ಯನ್ನರಿಗೆ ಸೌದಿಅರೇಬಿಯದ ಕೋರ್ಟೊಂದು ಮರಣದಂಡನೆ ಶಿಕ್ಷೆ ವಿಧಿಸಿದೆ. ಸೌದಿ ಮಹಿಳೆಯ ಮನೆಯೊಂದರಲ್ಲಿ ಸಶಸ್ತ್ರ ದರೋಡೆ ಮಾಡಿ ಮಹಿಳೆಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಕಳೆದ ನ.2005ರಂದು ಅವರನ್ನು ಬಂಧಿಸಲಾಗಿತ್ತು.
ಈ ತೀರ್ಪಿಗೆ ಪ್ರತಿಕ್ರಿಯಿಸಲು ಅವರಿಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಅಪರಾಧಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಇನ್ನೂ ಐವರು ಶ್ರೀಲಂಕನ್ನರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 500 ಛಡಿಯೇಟಿನ ಶಿಕ್ಷೆಯನ್ನು ನೀಡಲಾಗಿದೆ.
ಈ ತೀರ್ಪಿನ ವಿರುದ್ಧ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ತೀವ್ರವಾಗಿ ಖಂಡಿಸಿದೆ. ಯಾವುದೇ ನ್ಯಾಯಾಂಗ ವಿಧಾನಗಳಿಲ್ಲದೇ ಮರಣದಂಡನೆ ಶಿಕ್ಷೆ ವಿಧಿಸುವುದನ್ನು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ತರಾಟೆಗೆ ತೆಗೆದುಕೊಂಡಿದೆ. ಆರೋಪಿಗಳಿಗೆ ಯಾವುದೇ ಸಂದರ್ಭದಲ್ಲಿ ಕಾನೂನು ನೆರವು ನೀಡಿಲ್ಲ.
ವಿಚಾರಣೆ ವೇಳೆಯಲ್ಲಿ ಕೂಡ ಅವರು ಒತ್ತಡದಿಂದ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಅಮ್ನೆಸ್ಟಿ ಹೇಳಿಕೆಯೊಂದರಲ್ಲಿ ತಿಳಿಸಿದೆ. ಕಳೆದ ಫೆ.19ರಂದು ಸಶಸ್ತ್ರ ದರೋಡೆ ಆರೋಪದ ಮೇಲೆ ನಾಲ್ವರು ಶ್ರೀಲಂಕಾ ವಲಸೆ ಕಾರ್ಮಿಕರ ತಲೆಯನ್ನು ಕಡಿಯಲಾಗಿತ್ತು.
|