ಪಾಕಿಸ್ತಾನದ ಪ್ರಕ್ಷುಬ್ಧಪೀಡಿತ ಉತ್ತರ ವಾಜಿರಿಸ್ತಾನದ ಶಾಲೆಯೊಂದರಲ್ಲಿ ಸೋಮವಾರ ಉಗ್ರಗಾಮಿಗಳು 250 ಮಕ್ಕಳನ್ನು ಒತ್ತೆಯಾಳಾಗಿಸಿಕೊಂಡ ಘಟನೆ ನಡೆದಿದೆ. ಪೊಲೀಸರು ಬೆನ್ನಟ್ಟಿದ 7 ಇಸ್ಲಾಮಿಕ್ ಉಗ್ರಗಾಮಿಗಳು ಕಾರತ್ ಪಟ್ಟಣದ ಶಾಲೆಯೊಂದರಲ್ಲಿ ಆಶ್ರಯ ಪಡೆದರು. ತಮ್ಮನ್ನು ಸುರಕ್ಷಿತೆಗಾಗಿ ಅವರು ಒತ್ತಾಯಿಸುತ್ತಿದ್ದು, ಪ್ರಾಂತೀಯ ಸರ್ಕಾರದ ಜತೆ ಮಾತುಕತೆಗೆ ಇಳಿದಿದ್ದಾರೆ.
ಈ ಮುಂಚೆ ಉಗ್ರಗಾಮಿಗಳು ಆರೋಗ್ಯ ಕಾರ್ಯಕರ್ತನನ್ನು ಅಪಹರಿಸಿದ್ದು, ನಂತರ ನಡೆದ ಗುಂಡಿನಕಾಳಗದಲ್ಲಿ ಪೊಲೀಸರು ಒಬ್ಬ ಉಗ್ರನನ್ನು ಕೊಂದಿದ್ದರು.
ರಾಕೆಟ್ ಲಾಂಚರ್ ಮತ್ತು ಗ್ರೆನೇಡ್‌ಗಳಿಂದ ಸಜ್ಜಾದ ಉಗ್ರಗಾಮಿಗಳು ಡೊಮೇಲ್ ಗ್ರಾಮದ ಶಾಲೆಯಿಂದ ತಮಗೆ ಸುರಕ್ಷಿತವಾಗಿ ಹೊರಗೆ ಹೋಗಲು ಅವಕಾಶ ಕಲ್ಪಿಸುವಂತೆ ಅವರು ಒತ್ತಾಯಿಸಿದ್ದರು.
|