ಪರಮಾಣು ಸಂಸ್ಕರಣೆಯನ್ನು ಸ್ಥಗಿತಗೊಳಿಸುವಂತೆ, ಪರಮಾಣು ಉದ್ದೇಶಗಳನ್ನು, ಹಿಂದಿನ ಪರಮಾಣು ಕಾರ್ಯಗಳನ್ನು ಬಹಿರಂಗಮಾಡುವಂತೆ ಮತ್ತು ಸ್ವದೇಶದಲ್ಲಿ ದಮನಕಾರಿ ನೀತಿಯನ್ನು ಅನುಸರಿಸುವುದನ್ನು ಹಾಗೂ ವಿದೇಶದಲ್ಲಿ ಭಯೋತ್ಪಾದನೆಗೆ ಬೆಂಬಲವನ್ನು ನಿಲ್ಲಿಸುವಂತೆ ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಇರಾನ್‌ಗೆ ಕರೆ ನೀಡಿದ್ದಾರೆ.
ಸಂಸತ್ತಿನಲ್ಲಿ ಸೋಮವಾರ ಸಂಜೆ ಮಾಡಿದ ಭಾಷಣದಲ್ಲಿ, ಅಮೆರಿಕದ ಪಡೆಗಳಿಗೆ ಬೆದರಿಕೆ ವಿರುದ್ಧ ಅಮೆರಿಕ ಪ್ರತಿರೋಧ ವ್ಯಕ್ತಪಡಿಸುತ್ತದೆ, ಅದರ ಮಿತ್ರರಾಷ್ಟ್ರಗಳಿಗೆ ಬೆಂಬಲವಾಗಿ ನಿಲ್ಲುತ್ತದೆ ಮತ್ತು ಪರ್ಶಿಯದ ಕೊಲ್ಲಿಯಲ್ಲಿ ಅದರ ಮುಖ್ಯ ಹಿತಾಸಕ್ತಿಗಳನ್ನು ಸಮರ್ಥಿಸಿಕೊಳ್ಳುತ್ತದೆ ಎಂದು ಹೇಳಿದರು. ಅಲ್ ಕೈದಾ ತಲೆತಪ್ಪಿಸಿಕೊಂಡು ತಿರುಗುತ್ತಿದ್ದು, ಇರಾಕ್‌ನಲ್ಲಿ ಈ ವರ್ಷ ಕಠಿಣ ಹೋರಾಟ ನಿರೀಕ್ಷಿಸಬಹುದು ಮತ್ತು ಭಯೋತ್ಪಾದಕರನ್ನು ಸೋಲಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸೆಪ್ಟೆಂಬರ್ 11ರ ಘಟನೆ ಬಳಿಕ ಈ ಭಯೋತ್ಪಾದಕರು ಮತ್ತು ತೀವ್ರವಾದಿಗಳ ವಿರುದ್ಧ ಹೋರಾಟವನ್ನು ನಾವು ಕೈಗೆತ್ತಿಕೊಂಡಿದ್ದೇವೆ. ನಾವು ಭಯೋತ್ಪಾದಕರ ವಿರುದ್ಧ ಒತ್ತಡ ಹೇರಿ ನಮ್ಮ ಶತ್ರುಗಳಿಗೆ ಸರಿಯಾದ ಪಾಠ ಕಲಿಸುತ್ತೇವೆ ಎಂದು ಅವರು ನುಡಿದರು.
ಇರಾಕ್‌ನಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದೇವೆ. ಆದರೆ ನಮ್ಮ ಶತ್ರು ಇನ್ನೂ ಅಪಾಯಕಾರಿಯಾಗಿದ್ದು, ಇನ್ನೂ ಹೆಚ್ಚು ಕೆಲಸಗಳು ಉಳಿದಿವೆ ಎಂದು ಅಮೆರಿಕದ ಅಧ್ಯಕ್ಷರು ಹೇಳಿದರು.
|