ನೈಋತ್ಯ ಚೀನ ಪ್ರಾಂತ್ಯವಾದ ಗುಜೌನಲ್ಲಿ ಬಸ್ಸೊಂದು ಹಿಮಾಚ್ಛಾದಿತ ರಸ್ತೆಯಿಂದ ಕಣಿವೆಯೊಂದಕ್ಕೆ ಉರುಳಿಬಿದ್ದು, ಕನಿಷ್ಠ 25 ಜನರು ಮಂಗಳವಾರ ಸತ್ತಿದ್ದಾರೆ. ಈ ಅಪಘಾತದಲ್ಲಿ 13 ಪ್ರಯಾಣಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
38 ಜನ ಪ್ರಯಾಣಿಕರಿದ್ದ ಬಸ್ ಹಿಮದಿಂದ ದಟ್ಟವಾಗಿ ಆವೃತವಾದ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ, ಈ ದುರ್ಘಟನೆ ಸಂಭವಿಸಿದೆ ಎಂದು ಇನುವಾ ಸುದ್ದಿಸಂಸ್ಥೆ ತಿಳಿಸಿದೆ.
ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ತೀವ್ರ ಹಿಮಪಾತ ಸಂಭವಿಸಿದೆ. ಈ ದಶಕದಲ್ಲಿ ಚೀನಾದ್ಯಂತ ಭೀಕರ ಹಿಮಪಾತ ಅಪ್ಪಳಿಸಿ 24 ಜನರು ಸತ್ತಿದ್ದಾರೆ.
|