ಶ್ರೀಲಂಕಾದ ಆಕರ್ಷಕ ಕ್ಯಾಂಡಿ ನಗರದಲ್ಲಿ ಜು. 27ರಿಂದ 15ನೇ ಸಾರ್ಕ್ ಶೃಂಗಸಭೆ ನಡೆಯಲಿದ್ದು, ಎಲ್‌ಟಿಟಿಇಯ ಯಾವುದೇ ದಾಳಿ ಎದುರಿಸಲು ಪೂರ್ಣಮಟ್ಟದ ಭದ್ರತಾ ವ್ಯವಸ್ಥೆಗಳನ್ನು ಮಾಡಲು ಕೊಲಂಬೊ ಯೋಜಿಸಿದೆ. ಅಧ್ಯಕ್ಷರಾದ ಮಹೀಂದ್ರ ರಾಜಪಕ್ಷೆ ಕ್ಯಾಂಡಿಗೆ ಸೋಮವಾರ ಭೇಟಿ ನೀಡಿದ್ದು, ಜು.27ರಂದು ನಡೆಯುವ ಸಾರ್ಕ್ ಸಭೆಗೆ ಸಕಾಲದಲ್ಲಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಸಂಬಂಧಪಟ್ಟಂತೆ ಸಭೆ ನಡೆಸಿದರೆಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭದ್ರತಾ ವಿಷಯಗಳನ್ನು ಕೂಡ ಚರ್ಚಿಸಲಾಗುವುದು ಎಂದು ಅಧಿಕಾರಿ ಹೇಳಿದ್ದು, ಪೂರ್ಣಮಟ್ಟದ ವ್ಯವಸ್ಥೆಗಳಿಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲು ನಿಶ್ಚಯಿಸಲಾಯಿತೆಂದು ಅವರು ತಿಳಿಸಿದರು. ವಾರವಿಡೀ ನಡೆಯುವ ಶೃಂಗಸಭೆ ಆ.3ರಂದು ಮುಗಿಯಲಿದ್ದು, ಪ್ರಧಾನಮಂತ್ರಿ ಮನಮೋಹನ ಸಿಂಗ್ ಸೇರಿದಂತೆ ಸಾರ್ಕ್ ನಾಯಕರು ಭೇಟಿಯಾಗಲಿದ್ದಾರೆ. "
ಶೃಂಗಸಭೆಗಾಗಿ ಸಕಾಲದಲ್ಲಿ ಇಡೀ ರಸ್ತೆಜಾಲವನ್ನು ನವೀಕರಿಸುವ ಪ್ರಸ್ತಾವನೆಯನ್ನು ಸರ್ಕಾರ ಮಾಡಿದೆ. ಕ್ಯಾಂಡಿ ವಿಹಾರಧಾಮದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತಿತರ ವರ್ಣರಂಜಿತ ಸಮಾರಂಭಗಳನ್ನು ಈ ಸಂದರ್ಭದಲ್ಲಿ ಏರ್ಪಡಿಸಲಾಗುವುದು. ಶೃಂಗಸಭೆಯ ಸಂದರ್ಭದಲ್ಲಿ ಕೊಲಂಬೊದಿಂದ ಕ್ಯಾಂಡಿಗೆ ವಿಶೇಷ ರೈಲು ಸೇವೆಗಳನ್ನು ಆಯೋಜಿಸಲಾಗುವುದು.
|