ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಅವರ ಹತ್ಯೆಯಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿತನಾದ ಅಪ್ರಾಪ್ತ ವಯಸ್ಕ ಬಾಲಕನು ಬೇನಜೀರ್ ಅವರ ಸಶಸ್ತ್ರ ಕಾರಿನ ಬಳಿ ಸ್ವತಃ ಸ್ಫೋಟಿಸಿಕೊಂಡ ಆತ್ಮಹತ್ಯೆ ಬಾಂಬರನ್ನು ಗುರುತಿಸಿದ್ದಾನೆಂದು ಪಾಕಿಸ್ತಾನಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಾಯವ್ಯ ಮುಂಚೂಣಿ ಪ್ರಾಂತ್ಯದ ದೇರಾ ಇಸ್ಲೈಲ್ ಖಾನ್ ಪಟ್ಟಣದಿಂದ ಬಂಧಿತರಾದ 15 ವರ್ಷ ವಯಸ್ಸಿನ ಐತೇಜ ಷಾ ಸ್ಫೋಟಿಸಿಕೊಂಡ ಬಾಂಬರ್ ಹೆಸರು ಬಿಲಾಲ್ ಎಂದು ಗುರುತಿಸಿದ್ದಾನೆ.
ಅವನು ದಕ್ಷಿಣ ವಾಜಿರಿಸ್ತಾನದ ಬುಡಕಟ್ಟು ಪ್ರದೇಶಕ್ಕೆ ಸೇರಿದವನು ಎಂದು ಒಳಾಡಳಿತ ಕಾರ್ಯದರ್ಶಿ ಸೈಯದ್ ಕಮಲ್ ಶಾ ತಿಳಿಸಿದರು. ಪಾಕಿಸ್ತಾನದ ತಾಲಿಬಾನ್ ಕಮಾಂಡರ್ ಬೈತುಲ್ಲಾ ಮೆಹಸೂದ್ ಭುಟ್ಟೊ ಅವರನ್ನು ಹತ್ಯೆ ಮಾಡಲು ಕಳಿಸಿದ ಐವರು ಸದಸ್ಯರ ತಂಡದಲ್ಲಿ ತಾನು ಸೇರಿದ್ದಾಗಿ ಶಾ ಪೊಲೀಸರಿಗೆ ತಿಳಿಸಿದ್ದಾನೆ.
ಐತಾಜ್ ಶಾ ಮತ್ತು ಅವರ ಸಹಚರ ಶೇರ್ ಜಮಾನ್ ಅವರನ್ನು ರಾವಲ್‌ಪಿಂಡಿಗೆ ಕರೆತರಲಾಗಿದ್ದು, ಫೆ.1ರಿಂದ ಪೊಲೀಸ್ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ.
|