ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀಲಂಕಾ: ಘರ್ಷಣೆಯಲ್ಲಿ 28 ಬಂಡುಕೋರರ ಹತ್ಯೆ
ಶ್ರೀಲಂಕಾ ಪಡೆಗಳು ಮತ್ತು ತಮಿಳು ವ್ಯಾಘ್ರ ಹೋರಾಟಗಾರರ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಕನಿಷ್ಠ 28 ಬಂಡುಕೋರರು ಮತ್ತು ಇಬ್ಬರು ಸರ್ಕಾರಿ ಸೈನಿಕರು ಸತ್ತಿದ್ದಾರೆಂದು ಮಿಲಿಟರಿ ಮಂಗಳವಾರ ತಿಳಿಸಿದೆ. ದ್ವೀಪದ ಉತ್ತರ ಜಿಲ್ಲೆಗಳಲ್ಲಿ ಈ ಚಕಮಕಿ ಸ್ಫೋಟಿಸಿದ್ದು, ಸೋಮವಾರದಿಂದ 42 ಉಗ್ರರು ಮತ್ತು ಇಬ್ಬರು ಸರ್ಕಾರಿ ಯೋಧರು ಹತರಾಗಿದ್ದಾರೆ.

ಜಾಫ್ನಾ, ವಾಯುನಿಯ, ಮನ್ನಾರ್‌ನಾಡ್ ವೆಲಿಯೋವಾ ಮತ್ತಿತರ ಕಡೆ ಘರ್ಷಣೆಗಳು ಸಂಭವಿಸಿದ್ದು, 28 ಎಲ್‌ಟಿಟಿಇ ಭಯೋತ್ಪಾದಕರು ಮತ್ತು ಇಬ್ಬರು ಯೋಧರು ಹತರಾಗಿದ್ದಾರೆ ಎಂದು ಮಿಲಿಟರಿ ವಕ್ತಾರ ಬ್ರಿಗೇಡಿಯರ್ ಉದಯ ನಾನಯಕ್ಕಾರಾ ತಿಳಿಸಿದರು.

ತಮ್ಮ ವಾಯುಪಡೆ ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಬಳಸಿದ ನೆಲೆಯ ಮೇಲೆ ಬಾಂಬ್ ದಾಳಿ ಮಾಡಿದ್ದಾಗಿ ಇತ್ತೀಚೆಗೆ ಶ್ರೀಲಂಕಾ ತಿಳಿಸಿದ್ದರೆ, ನಾಗರಿಕರ ಮೇಲೆ ಗುರಿಯಿರಿಸಿ ಬಾಂಬ್ ದಾಳಿ ಮಾಡಲಾಗಿದೆ ಎಂದು ಬಂಡುಕೋರರು ತಿಳಿಸಿದ್ದಾರೆ. ಕಳೆದ ವಾರ ಸರ್ಕಾರಿ ನಿಯಂತ್ರಿತ ಅನುರಾಧಪುರ ಜಿಲ್ಲೆಯ ಹೊರವಲಯದ ಕಾಡು ಪ್ರದೇಶದಲ್ಲಿ 16 ಮೃತದೇಹಗಳು ಪತ್ತೆಯಾಗಿವೆ.

ಈ ತಿಂಗಳಾರಂಭದಲ್ಲಿ ಬುಟ್ಟಾಲಾದಲ್ಲಿ ನಡೆದ ಬಾಂಬ್ ದಾಳಿಯಲ್ಲಿ 26 ಜನರು ಹತ್ಯೆಯಾಗಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸೇನೆಯು ದಾಳಿಗಳಿಗೆ ತಮಿಳು ವ್ಯಾಘ್ರ ಬಂಡುಕೋರರ ಮೇಲೆ ಆರೋಪ ಹೊರಿಸಿದ್ದು, ಸರ್ಕಾರ ಕದನವಿರಾಮಕ್ಕೆ ಔಪಚಾರಿಕ ಮುಕ್ತಾಯ ಹೇಳಿದ್ದಾರೆ.
ಮತ್ತಷ್ಟು
ಆತ್ಮಹತ್ಯೆ ಬಾಂಬರ್ ಗುರುತಿಸಿದ ಶಂಕಿತ ಬಾಲಕ
ಜುಲೈ 27ರಿಂದ ಕ್ಯಾಂಡಿಯಲ್ಲಿ ಸಾರ್ಕ್ ಶೃಂಗಸಭೆ
ಬಸ್ಸು ಕಣಿವೆಗೆ ಉರುಳಿಬಿದ್ದು 25 ಸಾವು
ಪರಮಾಣು ಸಂಸ್ಕರಣೆ ಸ್ಥಗಿತಕ್ಕೆ ಇರಾನ್‌ಗೆ ಕರೆ
ಉಗ್ರರ ಕೈಯಲ್ಲಿ 250 ಮಕ್ಕಳು ಒತ್ತೆಯಾಳು
ಹೊಸ ದಿಗ್ಬಂಧನದಿಂದ ಗಂಭೀರ ಪರಿಣಾಮ