ಪಾಕಿಸ್ತಾನದ ಮುಂಬರುವ ಚುನಾವಣೆಯಲ್ಲಿ ಕೆಲವು ಅಕ್ರಮವನ್ನು ಅಮೆರಿಕ ನಿರೀಕ್ಷಿಸಿದ್ದು, ನ್ಯಾಯಯುತ ಚುನಾವಣೆ ಖಾತ್ರಿಗೆ ಸಾಧ್ಯವಾದ ಎಲ್ಲವನ್ನೂ ಮಾಡುತ್ತಿದೆ ಎಂದು ಬುಷ್ ಆಡಳಿತದ ಉನ್ನತಾಧಿಕಾರಿ ತಿಳಿಸಿದ್ದಾರೆ.
ಈ ಬಾರಿಯ ಮತದಾನವು ಅಗತ್ಯ ಗುಣಮಟ್ಟವನ್ನು ಪೂರೈಸುವ ಬಗ್ಗೆ ತೀರ್ಮಾನಿಸಲು ರಾಜಕೀಯ ಪಕ್ಷಗಳು, ವೀಕ್ಷಕರು ಮತ್ತು ಮಾಧ್ಯಮದ ಅಭಿಪ್ರಾಯಗಳನ್ನು ಪರಿಶೀಲಿಸುವುದಾಗಿ ದಕ್ಷಿಣ ಮತ್ತು ಮಧ್ಯ ಏಷ್ಯದ ವಿದೇಶಾಂಗ ಸಹಾಯಕ ಕಾರ್ಯದರ್ಶಿ ರಿಚರ್ಡ್ ಬೌಚರ್ ತಿಳಿಸಿದರು.
ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್ ಚುನಾವಣೆಯಲ್ಲಿ ಯಾವುದೇ ಅಕ್ರಮವನ್ನು ತಳ್ಳಿಹಾಕಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದಾಗಿ ಯೂರೋಪಿಯನ್ ನಾಯಕರ ಜತೆ ನಡೆದ ಮಾತುಕತೆಯಲ್ಲಿ ಆಶ್ವಾಸನೆ ನೀಡಿದ್ದರು.
ನ್ಯಾಯಸಮ್ಮತ ಚುನಾವಣೆ ಖಾತ್ರಿಗೆ ನಾವು ಎಲ್ಲ ಕೆಲಸವನ್ನೂ ಮಾಡುತ್ತಿದ್ದೇವೆ. ವೀಕ್ಷಕರ ನೇಮಕ, ಮತಎಣಿಕೆಯಲ್ಲಿ ಪಾರದರ್ಶಕತೆಗೆ ನಾವು ಒತ್ತಾಯಿಸಿದ್ದೇವೆ ಎಂದು ಅವರು ನುಡಿದರು.
|