ಡೆಮೊಕ್ರಾಟಿಕ್ ಪಕ್ಷದ ಅಧ್ಯಕ್ಷ ಆಕಾಂಕ್ಷಿ ಹಿಲೇರಿ ರೋಧಾಂ ಕ್ಲಿಂಟನ್ ಫ್ಲೋರಿಡಾ ಡೆಮೋಕ್ರೆಟಿಕ್ ಅಧ್ಯಕ್ಷೀಯ ಪ್ರಾಥಮಿಕ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಎದುರಾಳಿ ಸೆನೆಟರ್ ಬಾರಕ್ ಒಬಾಮಾ ಅವರನ್ನು ಹಿಲೇರಿ ಸುಲಭವಾಗಿ ಸರಿಗಟ್ಟಿದ್ದಾರೆ.
ಎಣಿಕೆಯಾದ ಶೇ,19 ಮತಗಳಲ್ಲಿ ಶೇ.48 ಮತಗಳನ್ನು ಗಳಿಸಿದ್ದು, ಸಿಎನ್‌ಎನ್ ಹಿಲೇರಿ ಅವರನ್ನು ಜಯಶಾಲಿಯಾಗಿ ಬಿಂಬಿಸಿದೆ. ಒಬಾಮಾ ಶೇ.30ರಷ್ಟು ಮತಗಳನ್ನು ಸ್ವೀಕರಿಸಿದ್ದಾರೆ. ಮಾಜಿ ಸೆನೇಟರ್ ಜಾನ್ ಎಡ್‌ವಾರ್ಡ್ಸ್ ಶೇ. 14 ಮತಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಹಿಲೇರಿ ಜಯವು ನವೆಂಬರ್ ಅಧ್ಯಕ್ಷೀಯ ಚುನಾವಣೆಯಲ್ಲಿ ಪಕ್ಷದ ನಾಮಕರಣಕ್ಕೆ ಪಡೆಯಬೇಕಾದ ನಿರ್ಣಾಯಕ ಪ್ರತಿನಿಧಿಗಳನ್ನು ನೀಡುವುದಿಲ್ಲ.
|