ಅಮೆರಿಕದ ಅಧ್ಯಕ್ಷಿಯ ಚುನಾವಣೆ ನಿಮಿತ್ಯ ಫ್ಲೊರಿಡಾದಲ್ಲಿ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ರಿಪಬ್ಲಿಕನ್ ಸೆನೆಟರ್ ಜಾನ್‌ಮೆಕ್‌ಕ್ಯಾನ್ ಅವರು ಗೆಲುವು ಸಾಧಿಸಿದ್ದಾರೆ.
ತಮ್ಮ ಎದುರಾಳಿ ಮೆಸುಚುಸೆಟ್ಸ್ ಮಾಜಿ ರಾಜ್ಯಪಾಲ ಮಿಟ್ ರೊಮನೆ ಅವರನ್ನು ಸೋಲಿಸಿ ಮುದಿನ ವಾರದಲ್ಲಿ 20 ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗೆ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.
ಈ ಗೆಲುವಿನಿಂದಾಗಿ ಸೆನೆಟರ್ ಜಾನ್‌ಮೆಕ್‌ಕ್ಯಾನ್ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಅಕಾಂಕ್ಷಿಗಳ ಸಾಲಿನಲ್ಲಿ ಮೂಂಚುಣಿಯಲ್ಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮುಂದಿನ ವಾರದಲ್ಲಿ ಸುಮಾರು 20 ರಾಜ್ಯಗಳಲ್ಲಿ ಮತದಾನ ನಡೆಯಲಿರುವುದರಿಂದ ಕಠಿಣ ಸವಾಲಿನ ಸ್ಪರ್ಧೆ ಎದುರಾಗಲಿದ್ದು ಮತದಾರರನ್ನು ಸಂಪರ್ಕಿಸುವ ಕಾರ್ಯದಲ್ಲಿ ನಿರತನಾಗಿದ್ದೇನೆ ಎಂದು ಜಾನ್ ಮೆಕ್‌ಕ್ಯಾನ್ ಹೇಳಿದ್ದಾರೆ.
|