ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಸ್ರೇಲ್ ವಿರುದ್ಧ ಅಹ್ಮದಿ ನಜಾದ್ ವಾಗ್ದಾಳಿ
ಇರಾನ್ ಅಧ್ಯಕ್ಷ ಮಹಮದ್ ಅಹ್ಮದಿ ನೆಜಾದ್ ಬುಧವಾರ ಇಸ್ರೇಲ್ ವಿರುದ್ಧ ತಮ್ಮ ವಾಗ್ದಾಳಿಯನ್ನು ನವೀಕರಿಸಿದ್ದು, ಇಸ್ರೇಲ್ ದಿನಗಳು ಬೆರಳೆಣಿಕೆಯಷ್ಟಿದೆ ಮತ್ತು ಜಿಯೋವಾದಿ ಅಸ್ತಿತ್ವವು ಸದ್ಯದಲ್ಲೇ ಕುಸಿದುಬೀಳಲಿದೆ ಎಂದು ಹೇಳಿದ್ದಾರೆ. ಬುಷೇರ್‌ನಲ್ಲಿ ಟೆಲಿವಿಷನ್ ನೇರ ಪ್ರಸಾರದಲ್ಲಿ ಅಹ್ಮದಿನಜಾದ್ ವಿಶ್ವಶಕ್ತಿಗಳಿಗೆ ಮೇಲಿನಂತೆ ಕರೆ ನೀಡಿದರು. ಕ್ರಿಮಿನಲ್ ಜಿಯೋವಾದಿಗಳನ್ನು ಬೆಂಬಲಿಸುವವರು ಅವರ ದಿನಗಳು ಸಮೀಪಿಸುತ್ತಿದೆ ಎಂದು ತಿಳಿದರಲಿ ಎಂದು ಅವರು ನುಡಿದರು.

ಇಸ್ಲಾಂ ಗಣರಾಜ್ಯವು ಇಸ್ರೇಲನ್ನು ಅಮೆರಿಕದ ಸಹಿತ ತನ್ನ ಕಡುವೈರಿಯಾಗಿ ಪರಿಗಣಿಸಿದ್ದು, ಯಹೂದಿ ರಾಷ್ಟ್ರದ ವಿರುದ್ಧ ಅದರ ವೈರವು ಅಹ್ಮದ್ ನಜಾದಿ ಅಧ್ಯಕ್ಷರಾದ ಬಳಿ ಇನ್ನಷ್ಟು ತೀವ್ರಗೊಂಡಿದೆ.

ಯಹೂದಿಗಳ ರಾಷ್ಟ್ರವನ್ನು ಭೂಪಟದಿಂದ ಅಳಿಸಿಹಾಕಬೇಕೆಂದು ಕರೆ ನೀಡುವ ಮುಖಾಂತರ ಅಹ್ಮದಿ ನಜಾದ್ ಅಂತಾರಾಷ್ಟ್ರೀಯ ಸಮುದಾಯದ ಕೋಪಕ್ಕೆ ಗುರಿಯಾಗಿದ್ದರು. ಇರಾನ್ ತನ್ನ ವಿವಾದಾತ್ಮಕ ಪರಮಾಣು ಕಾರ್ಯಾಚರಣೆಯ ವಿರುದ್ಧ ಮೂರನೇ ಸುತ್ತಿನ ವಿಶ್ವಸಂಸ್ಥೆ ದಿಗ್ಬಂಧನವನ್ನು ಎದುರಿಸುತ್ತಿರುವ ಸಂದರ್ಭದಲ್ಲೇ ಇರಾನ್ ಅಧ್ಯಕ್ಷರ ಹೇಳಿಕೆ ಹೊರಬಿದ್ದಿದೆ.
ಮತ್ತಷ್ಟು
ಅಮೆರಿಕ; ಜಾನ್‌ಮೆಕ್‌ಕ್ಯಾನ್‌ಗೆ ಗೆಲುವು
ಫ್ಲೋರಿಡಾದಲ್ಲಿ ಹಿಲೇರಿ ಕ್ಲಿಂಟನ್ ಗೆಲುವು
ಪಾಕ್‌ನಲ್ಲಿ ನ್ಯಾಯಯುತ ಚುನಾವಣೆಗೆ ಎಲ್ಲ ಕ್ರಮ
ಮೂತ್ರಪಿಂಡ ಜಾಲದ ಅಮಿತ್ ಕೆನಡಕ್ಕೆ ಪಲಾಯನ?
ಶ್ರೀಲಂಕಾ: ಘರ್ಷಣೆಯಲ್ಲಿ 28 ಬಂಡುಕೋರರ ಹತ್ಯೆ
ಆತ್ಮಹತ್ಯೆ ಬಾಂಬರ್ ಗುರುತಿಸಿದ ಶಂಕಿತ ಬಾಲಕ