ಬಹುಕೋಟಿ ಮೂತ್ರಪಿಂಡ ಕಸಿ ಜಾಲದ ರೂವಾರಿ ಅಮಿತ್ ಕುಮಾರ್ ಕೆನಡಾಗೆ ಪಲಾಯನ ಮಾಡಿರಬಹುದೆಂಬ ವರದಿಗಳ ನಡುವೆ, ಕೆನಡ ಮತ್ತು ಭಾರತದ ಇಂಟರ್‌ಪೋಲ್ ಸಿಬ್ಬಂದಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪರ್ಕವಿರಿಸಿಕೊಂಡಿದೆ.
ಪ್ರಸಕ್ತ ಕೆನಡದ ಅಧಿಕಾರಿಗಳಿಗೆ ಭಾರತದ ಪೊಲೀಸರ ತನಿಖೆ ಬಗ್ಗೆ ಸೀಮಿತ ಮಾಹಿತಿ ಲಭ್ಯವಿದೆ ಎಂದು ಕೆನಡ ಪೊಲೀಸ್ ವಕ್ತಾರ ತಿಳಿಸಿದರು. ಒಟ್ಟಾವಾ ಇಂಟರ್‌ಪೋಲ್ ನವದೆಹಲಿ ಇಂಟರ್‌ಪೋಲ್ ಜತೆ ಸಂಪರ್ಕದಲ್ಲಿದೆ ಎಂದು ರಾಯಲ್ ಕೆನಡ ಮೌಂಟನ್ ಪೊಲೀಸ್ ಸಾರ್ಜೆಂಟ್ ಸಿಲ್ವಿಯ ಟ್ರೆಂಬ್ಲೆ ತಿಳಿಸಿದರು.
ದೇಶದ ಬಡಜನರನ್ನು ವಂಚಿಸಿ ನೂರಾರು ಮೂತ್ರಪಿಂಡಗಳನ್ನು ಅಕ್ರಮವಾಗಿ ಪಡೆದ ಡಾ.ಹಾರರ್ ಎಂದೇ ಕುಖ್ಯಾತನಾದ ಕುಮಾರ್ ಕೆನಡಾದ ಅವನ ಕುಟುಂಬ ವಾಸ್ತವ್ಯ ಹೂಡಿರುವ ಕೆನಡಾದ ಅಜ್ಞಾತ ಸ್ಥಳದಿಂದ ಕಾರ್ಯಾಚರಣೆ ನಡೆಸುತ್ತಿದ್ದಾನೆಂದು ಶಂಕಿಸಲಾಗಿದೆ ಎಂದು ಕೆನಡದ ದಿನಪತ್ರಿಕೆ ನ್ಯಾಷನಲ್ ಪೋಸ್ಟ್ ವರದಿ ಮಾಡಿದೆ.
|