ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾರ್ಖಾನೆ ಕಟ್ಟಡದಲ್ಲಿ ಸ್ಫೋಟಕ್ಕೆ 17 ಬಲಿ
ಇಲ್ಲಿನ ಕಾರ್ಖಾನೆ ಕಟ್ಟಡದಲ್ಲಿ ಸಂಭವಿಸಿದ ಸ್ಫೋಟದಲ್ಲಿ 17 ಜನರು ಸತ್ತಿದ್ದಾರೆ ಮತ್ತು 40 ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿ ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಕರ್ತರು ಬದುಕುಳಿದವರಿಗಾಗಿ ಅವಶೇಷಗಳಲ್ಲಿ ಹುಡುಕಿದರು.

ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಗವರ್ನರ್ ಮೌಮ್ಮರ್ ಗುಲರ್ ಭಯೋತ್ಪಾದನೆ ಸ್ಫೋಟಕ್ಕೆ ಕಾರಣವೆಂಬುದನ್ನು ತಳ್ಳಿಹಾಕಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದರು. ಈ ಕಟ್ಟಡದಲ್ಲಿ ಜವಳಿ ತಯಾರಕರು ಮತ್ತು ಪರವಾನಗಿರಹಿತ ಪಟಾಕಿ ತಯಾರಕರು ವ್ಯವಹಾರ ನಡೆಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.

ಸಮೀಪದ ಕಟ್ಟಡಗಳಿಗೆ ಕೂಡ ಹಾನಿಯಾಗಿದೆ.ಇಸ್ತಾನ್‌ಬುಲ್ ಆರೋಗ್ಯ ಪ್ರಾಧಿಕಾರದ ಮುಖ್ಯಸ್ಥ ಮೆಹ್ಮತ್ ಬಕರ್ 17 ಮಂದಿ ಸತ್ತಿದ್ದಾರೆಂದು ತಿಳಿಸಿದ್ದಾಗಿ ಸಿಎನ್‌ಎನ್-ಟರ್ಕ್ ಟೆಲಿವಿಷನ್ ವರದಿ ಮಾಡಿದೆ. ಗಾಯಗೊಂಡ 40 ಜನರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ಹೇಳಿದರು.ಇಸ್ತಾನ್‌ಬುಲ್‌ನ ಡಾವಟ್‌ಪಾಸಾ ಕಟ್ಟಡದಲ್ಲಿ ಕಾರ್ಖಾನೆ ಕಟ್ಟಡದ ಭಾಗ ಕುಸಿದಿದ್ದು, ಮೇಲ್ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ಎನ್‌ಟಿವಿ ತಿಳಿಸಿದೆ.
ಮತ್ತಷ್ಟು
ಕೆನಡ-ಭಾರತ ಇಂಟರ್‌ಪೋಲ್ ಸಂಪರ್ಕ
ಇಸ್ಲಾಮಾಬಾದ್:ರಸ್ತೆಬದಿ ಬಾಂಬ್ ಸ್ಫೋಟ
ಇಸ್ರೇಲ್ ವಿರುದ್ಧ ಅಹ್ಮದಿ ನಜಾದ್ ವಾಗ್ದಾಳಿ
ಅಮೆರಿಕ; ಜಾನ್‌ಮೆಕ್‌ಕ್ಯಾನ್‌ಗೆ ಗೆಲುವು
ಫ್ಲೋರಿಡಾದಲ್ಲಿ ಹಿಲೇರಿ ಕ್ಲಿಂಟನ್ ಗೆಲುವು
ಪಾಕ್‌ನಲ್ಲಿ ನ್ಯಾಯಯುತ ಚುನಾವಣೆಗೆ ಎಲ್ಲ ಕ್ರಮ