ರಾಫಾದ ಗಡಿಪಟ್ಟಣದಲ್ಲಿ ಈಜಿಪ್ಟ್ ಭದ್ರತೆಯನ್ನು ತೀವ್ರಗೊಳಿಸಿದ್ದು, ಗಾಜಾ ಪಟ್ಟಿಯ ಒಳಗೆ ಮತ್ತು ಹೊರಗೆ ಹೋಗುವ ಜನರ ಹರಿವನ್ನು ನಿಯಂತ್ರಿಸುವ ಸಲುವಾಗಿ ಒಂದು ವಾರದ ಕೆಳಗೆ ತೆರೆಯಲಾದ ಗೋಡೆಯನ್ನು ಪುನಃ ಮುಚ್ಚಿದೆ.ಪ್ಯಾಲೆಸ್ತೀನ್ ಪ್ರದೇಶಕ್ಕೆ ಹೋಗುವ ಎರಡು ಗೇಟುಗಳ ನಡುವೆ ಈಜಿಪ್ಟಿನ ಪಡೆಗಳು ತಂತಿ ಬೇಲಿಗಳನ್ನು ಹಾಕಿದ್ದು, ರಾಫಾದಿಂದ ಗಡಿಯುದ್ದಕ್ಕೂ ರಸ್ತೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದಾರೆ.
ಸಿನಾಯ್ ಪರ್ಯಾಯ ದ್ವೀಪದ ಉತ್ತರಕ್ಕೆ 20,000 ಮಂದಿ ಭದ್ರತಾ ಪಡೆಯನ್ನು ನಿಯೋಜಿಸಿರುವುದಾಗಿ ಮೂಲಗಳು ತಿಳಿಸಿವೆ. ಹಮಾ ಆಡಳಿತದ ಪ್ರದೇಶಕ್ಕೆ ತಡೆ ವಿಧಿಸಿ ಇಂಧನ ಮತ್ತು ನೆರವಿನ ಪೂರೈಕೆಯನ್ನು ಇಸ್ರೇಲ್ ಕಡಿತಮಾಡಿದ ಬಳಿಕ ಗಡಿ ಗೋಡೆಯಲ್ಲಿ ಉಗ್ರರು ರಂಧ್ರಗಳನ್ನು ಮಾಡಿ ಈಜಿಪ್ಟಿಗೆ ಸಾವಿರಾರು ಪ್ಯಾಲೆಸ್ತೀನಿಯರು ನುಗ್ಗಿದರು.
ಗಡಿಯನ್ನು ನಿಯಂತ್ರಿಸುವ ಸಣ್ಣಪುಟ್ಟ ಕ್ರಮಗಳ ನಡುವೆ, ಪ್ಯಾಲೆಸ್ತೀನ್ ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ಮತ್ತು ಹಮಾಸ್‌ನ ನಿಯೋಗವು ಈಜಿಪ್ಟಿನ ಅಧ್ಯಕ್ಷ ಮುಬಾರಕ್ ಜತೆ ಬಿಕ್ಕಟ್ಟಿನ ಕುರಿತ ಮಾತುಕತೆಗೆ ಕೈರೊಗೆ ಪ್ರಯಾಣಿಸಲಿದ್ದಾರೆ.
|