ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಲ್ ಕೈದಾ ಪ್ರಮುಖ ನಾಯಕನ ಹತ್ಯೆ
ಅಲ್ ಕೈದಾದ ಪ್ರಮುಖ ನಾಯಕ ಅಬು ಲೈತ್ ಅಲ್ ಲಿಬಿ ಹತನಾಗಿದ್ದಾನೆ ಎಂದು ಇಸ್ಲಾಂ ವೆಬ್‌ಸೈಟೊಂದು ಗುರುವಾರ ತಿಳಿಸಿದೆ. ಅಲ್ ಕೈದಾ ಭಾಗವಾದ ವೇದಿಕೆ ಅಲ್-ಎಕ್ಲಾಸ್ ಲಿಬಿ ಸಾವಿನ ಸುದ್ದಿಯನ್ನು ಪ್ರಕಟಿಸಿದೆ. ಅಲ್ ಕೈದಾ ವಿಡಿಯೋಗಳಲ್ಲಿ ಹಿಂದೆ ಕಾಣಿಸಿಕೊಂಡಿದ್ದ ಅವನು ಅಮೆರಿಕದ ವೈಮಾನಿಕ ದಾಳಿಯಲ್ಲಿ ಹಕನಾಗಿದ್ದಾನೆಂದು ಮಾದ್ಯಮದ ವರದಿಗಳನ್ನು ಉಲ್ಲೇಖಿಸಿ ಅದು ತಿಳಿಸಿದೆ.

ಲಿಬಿ ಸತ್ತಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ನ್ಯಾಟೊ ನೇತೃತ್ವದ ಪಡೆಗಳು ತಿಳಿಸಿವೆ. ಆದರೆ ಪಾಕಿಸ್ತಾನದಲ್ಲಿ ಅಲ್ ಕೈದಾ ಅಡಗುತಾಣದ ಮೇಲೆ ಅಮೆರಿಕದ ಕ್ಷಿಪಣಿ ಬಡಿದಾಗ 7 ಅರಬ್ಬರು ಮತ್ತು 6 ಮಧ್ಯ ಏಷಿಯನ್ನರು ಸೇರಿದಂತೆ ಅಲ್ ಕೈದಾ ಉಗ್ರರ ತಂಡ ಸತ್ತಿದೆ ಎಂದು ಪಾಕಿಸ್ತಾನದ ಭದ್ರತಾ ಅಧಿಕಾರಿಗಳು ಗುರುವಾರ ತಿಳಿಸಿದ್ದರು.

ಉತ್ತರ ವಾಜಿರಿಸ್ತಾನದ ಬುಡಕಟ್ಟು ಜಿಲ್ಲೆಯ ಮೇಲೆ ಸೋಮವಾರ ಬಹುಹೊತ್ತಿನಲ್ಲಿ ಕ್ಷಿಪಣಿ ಮನೆಯ ಮೇಲೆ ಬಡಿಯಿತು. ಅಮೆರಿಕ ನೇತೃತ್ವದ ಸಮ್ಮಿಶ್ರ ಪಡೆಗಳು ನಿರ್ವಹಿಸುವ ಪೈಲಟ್‌ರಹಿತ ವಿಮಾನವು ದಾಳಿಗೆ ಮುಂಚೆ ಆ ಪ್ರದೇಶದಲ್ಲಿ ಹಾರಾಡುತ್ತಿರುವುದನ್ನು ಕಂಡಿದ್ದಾಗಿ ನಿವಾಸಿಗಳು ವರದಿಮಾಡಿವೆ.
ಮತ್ತಷ್ಟು
ಚೀನದಲ್ಲಿ ಭೀಕರ ಹಿಮಪಾತ: ಬೆಳೆ ನಾಶ
ರಾಫಾ ಗಡಿಯಲ್ಲಿ ಈಜಿಪ್ಟ್ ಬಿಗಿಭದ್ರತೆ
ಕಾರ್ಖಾನೆ ಕಟ್ಟಡದಲ್ಲಿ ಸ್ಫೋಟಕ್ಕೆ 17 ಬಲಿ
ಕೆನಡ-ಭಾರತ ಇಂಟರ್‌ಪೋಲ್ ಸಂಪರ್ಕ
ಇಸ್ಲಾಮಾಬಾದ್:ರಸ್ತೆಬದಿ ಬಾಂಬ್ ಸ್ಫೋಟ
ಇಸ್ರೇಲ್ ವಿರುದ್ಧ ಅಹ್ಮದಿ ನಜಾದ್ ವಾಗ್ದಾಳಿ