ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ರಿಟನ್‌ನಲ್ಲಿ ವಲಸೆ ಶುಲ್ಕಗಳ ದರ ಹೆಚ್ಚಳ
ಮುಂದಿನ 12 ತಿಂಗಳಲ್ಲಿ ಗಡಿ ಭದ್ರತೆ ಸುಧಾರಣೆ ಸಲುವಾಗಿ ತೀವ್ರಗತಿಯ ಬದಲಾವಣೆಗೆ ಆರ್ಥಿಕ ನೆರವು ಒದಗಿಸಲು ವಲಸೆ ಶುಲ್ಕಗಳಲ್ಲಿ ಹೆಚ್ಚಳವನ್ನು ಬ್ರಿಟನ್ ಪ್ರಕಟಿಸಿದೆ. ಹೊಸ ಪಾಂಯಿಂಟ್ಸ್ ಮೂಲದ ವ್ಯವಸ್ಥೆಯನ್ನು ಕಾರ್ಯಾರಂಭಿಸಲು ಕೆಲವೇ ವಾರಗಳ ಮುನ್ನ ಗುರುವಾರ ಹೌಸ್ ಆಫ್ ಕಾಮನ್ಸ್‌ನಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸಲಾಯಿತು.

ಬ್ರಿಟನ್ ಆರ್ಥಿಕತೆಗೆ ಅನುಕೂಲವಾಗುವ ನುರಿತಕಾರ್ಮಿಕರ ಆಗಮನದ ಖಾತರಿಗೆ ಮತ್ತು ವಿದೇಶಗಳಿಂದ ನೇಮಕ ಮಾಡಿಕೊಳ್ಳುವ ಉದ್ಯಮಗಳಿಗೆ ಪರವಾನಗಿ ಪದ್ಧತಿಯ ಗುರಿಯನ್ನು ಈ ವ್ಯವಸ್ಥೆ ಇರಿಸಿಕೊಂಡಿದೆ.

ಅತ್ಯಂತ ನುರಿತ ವಲಸೆಗಾರ ಟಿ1 ಕಾರ್ಯಕ್ರಮಕ್ಕೆ ಶುಲ್ಕವು 400 ಪೌಂಡ್‌ಗಳಿಂದ 600 ಪೌಂಡ್‌ಗಳಿಗೆ ಏರಲಿದೆ. ಕೆಲಸದ ಪರ್ಮಿಟ್ ವೀಸಾ ಮತ್ತು ಪ್ರವಾಸಿ ವೀಸಾ(ದೀರ್ಘಾವಧಿ)ಗಳಿಗೆ ಶುಲ್ಕವನ್ನು 200 ಪೌಂಡ್‌ಗಳಿಂದ 205 ಪೌಂಡ್‌ಗಳಿಗೆ ಏರಿಸಲಾಗುವುದು ಮತ್ತು ಕಾಯಂ ನೆಲೆಸುವ ವೀಸಾ ಶುಲ್ಕವನ್ನು 500 ಪೌಂಡ್‌ಗಳಿಂದ 515 ಪೌಂಡ್‌ಗಳಿಗೆ ಏರಿಸಲಾಗುವುದು. ಪ್ರವಾಸಿ ವೀಸಾ ಶುಲ್ಕವನ್ನು 63 ಪೌಂಡ್‌ಗಳಿಂದ 65 ಪೌಂಡ್‌ಗಳಿಗೆ ಏರಿಸಲಾಗುವುದು.
ಮತ್ತಷ್ಟು
ಅಲ್ ಕೈದಾ ಪ್ರಮುಖ ನಾಯಕನ ಹತ್ಯೆ
ಚೀನದಲ್ಲಿ ಭೀಕರ ಹಿಮಪಾತ: ಬೆಳೆ ನಾಶ
ರಾಫಾ ಗಡಿಯಲ್ಲಿ ಈಜಿಪ್ಟ್ ಬಿಗಿಭದ್ರತೆ
ಕಾರ್ಖಾನೆ ಕಟ್ಟಡದಲ್ಲಿ ಸ್ಫೋಟಕ್ಕೆ 17 ಬಲಿ
ಕೆನಡ-ಭಾರತ ಇಂಟರ್‌ಪೋಲ್ ಸಂಪರ್ಕ
ಇಸ್ಲಾಮಾಬಾದ್:ರಸ್ತೆಬದಿ ಬಾಂಬ್ ಸ್ಫೋಟ