ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್; ಘೋರಿ ಕ್ಷಿಪಣಿ ಪರೀಕ್ಷೆ
ಅಣ್ವಸ್ತ್ರಗಳನ್ನು ಹೊತ್ತುಸಾಗುವ ಅತ್ಯಾಧುನಿಕ ಸುಧಾರಿತ ಮಧ್ಯಮ ವೇಗದ ಘೋರಿ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ ಎಂದು ಪಾಕ್ ಸೇನಾಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನ ಸೇನೆಯ ಕ್ಷಿಪಣಿ ಪರೀಕ್ಷಾ ವಿಭಾಗ 810 ಮೈಲುಗಳ ದೂರವನ್ನು ನಿಖರವಾಗಿ ಸಾಗುವ ಘೋರಿ ಕ್ಷಿಪಣಿ ಪರೀಕ್ಷೆಯನ್ನು ಅಜ್ಞಾತ ಸ್ಥಳದಿಂದ ನಡೆಸಲಾಗಿದೆ ಎಂದು ಪಾಕ್ ಮಿಲಿಟರಿ ತಿಳಿಸಿದೆ.

ಅತ್ಯಾಧುನಿಕ ಕ್ಷಿಪಣಿ ಘೋರಿಯ ಪರೀಕ್ಷೆಯ ಸಂದರ್ಭದಲ್ಲಿ ಪಾಕಿಸ್ತಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಸೇನಾಮುಖ್ಯಸ್ಥ ಹಾಗೂ ಇನ್ನಿತರ ಸೇನಾಧಿಕಾರಿಗಳು, ವಿಜ್ಞಾನಿಗಳು ಉಪಸ್ಥಿತರಿದ್ದರು ಎಂದು ಸೇನಾಮೂಲಗಳು ತಿಳಿಸಿವೆ.

ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿದ ಬೆನ್ನಲ್ಲೆ ಪಾಕಿಸ್ತಾನ ಅಣ್ವಸ್ತ್ರಗಳನ್ನು ಹೊತ್ತು ಸಾಗುವ ಕ್ಷಿಪಣಿ ಪರೀಕ್ಷೆಯನ್ನು ನಡೆಸಿ, ಅಣ್ವಸ್ತ್ರ ಹೊಂದಿದ ರಾಷ್ಟ್ರವೆಂದು 1998ರಲ್ಲಿ ಘೋಷಿಸಿಕೊಂಡಿತು.

ಏಷ್ಯಾ ಖಂಡದ ಪ್ರಮುಖ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಪೈಪೋಟಿಯ ಮಧ್ಯೆ ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುತ್ತಿವೆ.
ಮತ್ತಷ್ಟು
ಬ್ರಿಟನ್‌ನಲ್ಲಿ ವಲಸೆ ಶುಲ್ಕಗಳ ದರ ಹೆಚ್ಚಳ
ಅಲ್ ಕೈದಾ ಪ್ರಮುಖ ನಾಯಕನ ಹತ್ಯೆ
ಚೀನದಲ್ಲಿ ಭೀಕರ ಹಿಮಪಾತ: ಬೆಳೆ ನಾಶ
ರಾಫಾ ಗಡಿಯಲ್ಲಿ ಈಜಿಪ್ಟ್ ಬಿಗಿಭದ್ರತೆ
ಕಾರ್ಖಾನೆ ಕಟ್ಟಡದಲ್ಲಿ ಸ್ಫೋಟಕ್ಕೆ 17 ಬಲಿ
ಕೆನಡ-ಭಾರತ ಇಂಟರ್‌ಪೋಲ್ ಸಂಪರ್ಕ