ಕೇಂದ್ರ ಬಾಗ್ದಾದ್‌ನಲ್ಲಿ ಮಹಿಳಾ ಬಾಂಬರ್ ತನ್ನನ್ನು ತಾನು ಸ್ಪೋಟಿಸಿಕೊಂಡ ಹಿನ್ನೆಲೆಯಲ್ಲಿ ಸುಮಾರು 43 ಮಂದಿ ಸಾವನ್ನಪ್ಪಿದ್ದು 78 ಮಂದಿ ಗಾಯಗೊಂಡ ದಾರುಣ ಘಟನೆ ವರದಿಯಾಗಿದೆ.
ಮೊದಲ ಬಾಂಬ್ ಸ್ಪೋಟಗೊಂಡ ನಂತರ 20 ನಿಮಿಷದ ಅವಧಿಯಲ್ಲಿ ಬಾಗ್ದಾದ್‌ನ ಆಗ್ನೆಯ ಭಾಗದಲ್ಲಿರುವ ಶಿಯಾ ಪ್ರಾಬಲ್ಯದ ಬರ್ಡ್ ಮಾರುಕಟ್ಟೆಯಲ್ಲಿ ಮತ್ತೊಂದು ಬಾಂಬ್‌ಸ್ಪೋಟಗೊಂಡು 8 ಮಂದಿ ಸಾವನ್ನಪ್ಪಿದ್ದು 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಹಿಳಾ ಬಾಂಬರ್ ಬೆಳಿಗ್ಗೆ 10.20ಗಂಟೆಗೆ ತನ್ನ ಸಾಂಪ್ರದಾಯಕ ಉಡುಗೆಯಲ್ಲಿ ಸ್ಪೋಟಕಗಳನ್ನು ಅಡಗಿಸಿಕೊಂಡು ಬಾಗ್ದಾದ್‌ನ ಕೇಂದ್ರ ಸ್ಥಾನದಲ್ಲಿರುವ ಅಲ್-ಗಜಲ್ ಮಾರುಕಟ್ಟೆಗೆ ಆಗಮಿಸಿ ಜನನಿಬಿಡ ಸ್ಥಳದಲ್ಲಿ ತನ್ನನ್ನು ತಾನು ಸ್ಪೋಟಿಸಿಕೊಂಡಳೆಂದು ಪೊಲೀಸ್ ಮೂಲಗಳು ತಿಳಿಸಿವೆ.
|