ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕರಾಚಿಗೆ ಕಾಲಿಟ್ಟ ಹಕ್ಕಿ ಜ್ವರ
ಪಾಕಿಸ್ತಾನದ ದಕ್ಷಿಣ ಬಂದರು ನಗರ ಕರಾಚಿಯ ಕೆಲ ಕೋಳಿ ಫಾರ್ಮ್‌ಗಳಲ್ಲಿ ಹಕ್ಕಿ ಜ್ವರಕ್ಕೆ ತುತ್ತಾದ ಅಂದಾಜು ಐದೂವರೆ ಸಾವಿರ ಕೋಳಿಗಳು ಹಕ್ಕಿಜ್ವರದಿಂದ ಮೃತಪಟ್ಟಿವೆ ಎಂದು ತಿಳಿದುಬಂದಿದೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪಾಕಿಸ್ತಾನ ಪೌಲ್ಟ್ರಿ ಅಸೋಸಿಯೇಷನ್ ವಕ್ತಾರ ಅಬ್ದುಲ್ ಮರೂಫ್ ಸಿದ್ದಿಕಿ ಅವರು ಸತ್ತ ಕೋಳಿಗಳ ದೇಹದಿಂದ ತೆಗೆದುಕೊಳ್ಳಲಾಗಿರುವ ಮಾದರಿಯಲ್ಲಿ ಎಚ್5ಎನ್1 ಎವಿಯನ್ ಇನ್‌ಫ್ಲುಯೆಂಜಾ ವೈರಸ್ ಪತ್ತೆಯಾಗಿದೆ. ಸತ್ತ ಐದೂವರೆ ಸಾವಿರ ಕೋಳಿಗಳ ದೇಹದ ಆಯ್ದ ಭಾಗವನ್ನು ಇಸ್ಲಾಮಾಬಾದ್‌ನಲ್ಲಿ ಇರುವ ಪ್ರಯೋಗ ಶಾಲೆಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆಯ ನಂತರ ಹಕ್ಕಿಜ್ವರದ ಪಾಕಿಸ್ತಾನದ ಪೌಲ್ಟ್ರಿ ಫಾರ್ಮ್‌ಗಳಿಗೆ ಕಾಲಿಟ್ಟಿದೆ ಎಂದು ಧೃಡಪಟ್ಟಿದೆ.

ಹಕ್ಕಿಜ್ವರದ ಹರಡಿದ ಪ್ರದೇಶಗಳಲ್ಲಿನ ಕೋಳಿಗಳನ್ನು ನಿರ್ನಾಮ ಮಾಡುವುದಕ್ಕೆ ತಂಡಗಳನ್ನು ರವಾನಿಸಲಾಗಿದೆ. ಈ ಪ್ರದೇಶದ ಇತರ ಪೌಲ್ಟ್ರಿ ಫಾರ್ಮ್‌ಗಳಲ್ಲಿ ಇರುವ ಕೋಳಿಗಳು ಆರೋಗ್ಯವಾಗಿದ್ದು ವೈರಸ್ ಸೋಂಕಿಗೆ ತುತ್ತಾಗಿಲ್ಲ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಹಕ್ಕಿಜ್ವರದ ಪ್ರಕರಣಗಳು ಉಪಖಂಡದ ಬಾಂಗ್ಲಾದೇಶದಲ್ಲಿ ಮೊದಲು ಪತ್ತೆಯಾಗಿದ್ದು ನಂತರ ಭಾರತದ ಪಶ್ಚಿಮ ಬಂಗಾಲದಲ್ಲಿ ಹಕ್ಕಿಜ್ವರ ತೀವ್ರವಾಗಿ ವ್ಯಾಪಿಸಿತ್ತು. ಹದಿನೈದು ದಿನಗಳ ಅವಧಿಯಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ರೋಗ ಪತ್ತೆಯಾಗಿದೆ. ಕಳೆದ ಎರಡು ವರ್ಷಗಳ ನಂತರ ಪಾಕಿಸ್ತಾನದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಕಳೆದ ವರ್ಷ ಡಿಸೇಂಬರ್‌ನಲ್ಲಿ ಮನುಷ್ಯರಿಗೂ ಈ ವೈರಸ್ ಸೋಂಕು ತಗಲಿ ಆರು ಜನರು ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾರೆ.
ಮತ್ತಷ್ಟು
ಆತ್ಮಹತ್ಯಾ ದಾಳಿ ; 43 ಮಂದಿ ಸಾವು
ಪಾಕ್; ಘೋರಿ ಕ್ಷಿಪಣಿ ಪರೀಕ್ಷೆ
ಬ್ರಿಟನ್‌ನಲ್ಲಿ ವಲಸೆ ಶುಲ್ಕಗಳ ದರ ಹೆಚ್ಚಳ
ಅಲ್ ಕೈದಾ ಪ್ರಮುಖ ನಾಯಕನ ಹತ್ಯೆ
ಚೀನದಲ್ಲಿ ಭೀಕರ ಹಿಮಪಾತ: ಬೆಳೆ ನಾಶ
ರಾಫಾ ಗಡಿಯಲ್ಲಿ ಈಜಿಪ್ಟ್ ಬಿಗಿಭದ್ರತೆ