ಅಧಿಕಾರಕ್ಕೆ ಮರಳಿದ ಮರುಕ್ಷಣವೇ ಪದಚ್ಯುತಗೊಂಡಿರುವ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಇಪ್ತಿಕಾರ್ ಚೌಧರಿಯವರನ್ನು ಪುನಃ ಮುಖ್ಯ ನ್ಯಾಯಾಧೀಶ ಎಂದು ನೇಮಕ ಮಾಡಲಾಗುವುದು ಎಂದು ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಘೋಷಿಸಿದ್ದಾರೆ.
ಲಾಹೋರ್ ನಗರದಲ್ಲಿ ಫೆಬ್ರವರಿ ಆರರಂದು ಪಾಕಿಸ್ತಾನ ಮುಸ್ಲೀಂ ಲೀಗ್ ಪಕ್ಷದ ಅಭ್ಯರ್ಥಿಗಳು ಒಂದೇಡೆ ಸೇರಲಿದ್ದು, ಚುನಾವಣೆಯಲ್ಲಿ ಗೆದ್ದು ಸಂಸದರಾಗಿ ಆಯ್ಕೆಯಾದ ನಂತರ ಮೊದಲು ಪದಚ್ಯುತಗೊಂಡಿರುವ 60 ನ್ಯಾಯಾಧೀಶರನ್ನು ಪುನಃ ಅಧಿಕಾರಕ್ಕೆ ತರುವ ಪ್ರತಿಜ್ಞೆ ಮಾಡಲಿದ್ದೆವೆ ಎಂದು ಹೇಳಿದ್ದಾರೆಂದು ನ್ಯೂಸ್ ಪತ್ರಿಕೆ ವರದಿ ಮಾಡಿದೆ.
ಲಾಹೋರ್ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ರಾವಲ್ಪಿಂಡಿ ಬೆಂಚ್ ವತಿಯಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ನ್ಯಾಯವಾದಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪಾಕಿಸ್ತಾನಕ್ಕೆ ಪ್ರಜಾಪ್ರಭುತ್ವ ಸೂಕ್ತವಲ್ಲ ಮತ್ತು ಇಲ್ಲಿನ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡುವುದು ಸಾದ್ಯವಿಲ್ಲ ಎಂದು ಸರ್ವಾಧಿಕಾರಿ ಹೇಳಿರುವುದು ನಾಚಿಕೆಗೆಡಿತನದ ಸಂಗತಿ. ಈ ರೀತಿಯ ಅವಮಾನಕಾರಿ ಹೇಳಿಕೆಗೆ ವಿರುದ್ಧ ಒಟ್ಟಾಗಿ ಹೋರಾಟ ಮಾಡಲು ಮುಂದಾಗಬೇಕು ಎಂದು ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
|