ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಲೇಷಿಯಾ: ಚುನಾವಣೆಗೆ ಸ್ಪರ್ಧಿಸುವಂತೆ ಬಂಧಿತರ ಮೇಲೆ ಒತ್ತಾಯ
ಮಲೇಷಿಯಾದ ಕರಾಳ ರಕ್ಷಣಾ ಕಾನೂನಡಿಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಬಂಧಿತರಾಗಿರುವ ಅಲ್ಲಿನ ಐವರು ಹಿಂದು ನಾಯಕರು ಮುಂಬರುವ ಸಾಮಾನ್ಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಅವರ ಪರ ವಾದಿಸುತ್ತಿರುವ ನ್ಯಾಯವಾದಿಗಳು ಹೇಳಿದ್ದಾರೆ. ಭಾರತೀಯ ಮೂಲದ ನಾಗರಿಕರನ್ನು ಸರಕಾರ ಕಡೆಗಣಿಸುತ್ತಿದೆ ಎಂದು ಆರೋಪಿಸಿ ಕಳೆದ ವರ್ಷ ನವಂಬರ್ 25ರಂದು ಈ ಐವರು ನಾಯಕರು ಸರಕಾರದ ವಿರುದ್ಧ ರಾಲಿಯನ್ನು ಆಯೋಜಿಸಿದ್ದರು. ಅಂದು ಕೌಲಾಲಂಪುರದಲ್ಲಿ ನಡೆದ ರಾಲಿಗೆ 20 ಸಾವಿರ ಭಾರತೀಯ ಮೂಲದ ನಾಗರಿಕರು ಆಗಮಿಸಿದ್ದರು.

ಹಿಂದು ರೈಟ್ಸ್ ಆಕ್ಷನ್ ಫೋರ್ಸ್ ಎಂಬ ಸಂಘಟನೆ ಆಯೋಜಿಸಿದ್ದ ರಾಲಿಯನ್ನು ಸರಕಾರ ಕಾನೂನು ಬಾಹೀರ ಎಂದು ಘೋಷಿಸಿ ನಾಯಕರನ್ನು ನವಂಬರ್ 25ರಂದು ಸರಕಾರ ಬಂಧಿಸಿ ಜೈಲಿನಲ್ಲಿಟ್ಟಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಹಿಂಡ್ರಾಫ್ ನಾಯಕರ ಪರ ನ್ಯಾಯಾಲಯದಲ್ಲಿ ವಾದಿಸುತ್ತಿರುವ ಎಂ. ಕುಲಶೇಖರನ್ ಅವರು, ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಜನರು ಮನವಿ ಮಾಡುತ್ತಿದ್ದಾರೆ.ಸ್ಟಾರ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಎಂ. ಮನೋಹರನ್, ಪಿ ಉದಯಕುಮಾರ್, ವಿ ಗಣಪತಿ ರಾವು, ಆರ್, ಕೆಂಗಾಧರನ್ ಮತ್ತು ವಸಂತ್ ಕುಮಾರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು. ಮಲೇಷಿಯಾದಲ್ಲಿ ಸಾಮಾನ್ಯ ಚುನಾವಣೆಗಳು ಕೇಲವು ತಿಂಗಳುಗಳ ನಂತರ ಜರುಗಲಿವೆ.

ಮಲೇಷಿಯಾದ 27 ದಶಲಕ್ಷ ಜನಸಂಖ್ಯೆಯಲ್ಲಿ ಶೇ 8ರಷ್ಟು ಭಾರತೀಯ ಮೂಲದವರಿದ್ದು, ಶೇ 60ರಷ್ಟು ಮುಸ್ಲೀಂ ಜನಸಂಖ್ಯೆ ಇದೆ. ಇನ್ನುಳಿದ ಜನಸಂಖ್ಯೆಯಲ್ಲಿ ಚೀನಿ ಮೂಲದವರು ಶೇ 25ರಷ್ಟು ಇದ್ದಾರೆ. ಮಲೇಷಿಯಾದ ರಬ್ಬರ ತೋಟಗಳಲ್ಲಿ ಕೆಲಸ ಮಾಡುವುದಕ್ಕೆ ಎಂದು ಬ್ರಿಟಿಷರು 200 ವರ್ಷಗಳ ಹಿಂದೆ ತಮಿಳು ನಾಡಿನಿಂದ ಭಾರತೀಯ ಮೂಲದವರನ್ನು ಕರೆತಂದಿದ್ದರು.

ರಬ್ಬರ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 200 ಭಾರತೀಯ ಮೂಲದ ನಾಗರಿಕರು ಕೌಲಾಲಂಪುರದ ದೇವಸ್ಥಾನವೊಂದರಲ್ಲಿ ಶಾಂತಿಯುತ ಪ್ರತಿಭಟನೆಯ ಮೂಲಕ ಹಿಂಡ್ರಾಫ್ ನಾಯಕರಲ್ಲಿ ಓರ್ವ ನಾಯಕ, ಮಲೇಷಿಯನ್ ಇಂಡಿಯನ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಕಾಮಗಾರಿ ಸಚಿವ ಸ್ಯಾಮಿ ವೆಲ್ಲು ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಕೇಳಿಕೊಂಡಿದ್ದರು.
ಮತ್ತಷ್ಟು
ಚೌಧರಿಗೆ ಮತ್ತೆ ಮುಖ್ಯ ನ್ಯಾಯಾಧೀಶ ಪಟ್ಟ: ಷರೀಫ್
ತಮಿಳು ವ್ಯಾಘ್ರರ ದಾಳಿಗೆ 20 ಬಲಿ
ಕರಾಚಿಗೆ ಕಾಲಿಟ್ಟ ಹಕ್ಕಿ ಜ್ವರ
ಆತ್ಮಹತ್ಯಾ ದಾಳಿ ; 43 ಮಂದಿ ಸಾವು
ಪಾಕ್; ಘೋರಿ ಕ್ಷಿಪಣಿ ಪರೀಕ್ಷೆ
ಬ್ರಿಟನ್‌ನಲ್ಲಿ ವಲಸೆ ಶುಲ್ಕಗಳ ದರ ಹೆಚ್ಚಳ