ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭುಟ್ಟೊ ಹತ್ಯಾ ಆರೋಪಿ ಪೊಲೀಸರ ವಶಕ್ಕೆ
ಮಾಜಿ ಪಾಕ್ ಪ್ರಧಾನಿ ಬೆನಜೀರ್ ಭುಟ್ಟೊ ಅವರನ್ನು ಹತ್ಯೆಗೈದ ಆತ್ಮಾಹುತಿ ದಳದ ಸಂಶಯಿತ ಯುವ ಸದಸ್ಯನ ವಿಚಾರಣೆಯನ್ನು ಮುಂದುವರಿಸಲು ಅನುವಾಗುವಂತೆ ರಾವಲ್ಪಿಂಡಿಯ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಪೆಬ್ರವರಿ 12ರವರೆಗೆ ಪೊಲೀಸ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.

ಪಾಕಿಸ್ತಾನದ ವಾಯವ್ಯ ದಿಕ್ಕಿನಲ್ಲಿನಲ್ಲಿರು ಡೇರಾ ನಗರದಿಂದ ಹದಿನೈದು ವರ್ಷದ ಐತಾಜ್ ಶಾನನ್ನು ಸಹ ಆರೋಪಿ ಶೇರ್ ಜಮಾನ್‌ನೊಂದಿಗೆ ಪಾಕ್ ಪೊಲೀಸರು ಬಂಧಿಸಿದ್ದರು. ವಿಚಾರಣೆಯಲ್ಲಿ ಐತಾಜ್ ತಾನು ಬೆನಜೀರ್ ಹತ್ಯೆಗೈಯಲು ತಾಲಿಬಾನ್ ಕಮಾಂಡರ್ ಬೈತುಲ್ಲಾ ಮೆಹ್ಸೂದ್ ಕಳುಹಿಸಿದ್ದ ಐವರ ಸದಸ್ಯರ ತಂಡದಲ್ಲಿ ಓರ್ವ ಎಂದು ಒಪ್ಪಿಕೊಂಡಿದ್ದನು.

ಪೊಲೀಸರ ವಿಚಾರಣೆಯಲ್ಲಿ ಇನ್ನೂ ಅನೇಕ ಮಾಹಿತಿಗಳನ್ನು ಐತಾಜ್ ಬಹಿರಂಗ ಪಡಿಸಿದ್ದು. ಬೆನಜೀರ್ ಹತ್ಯೆ ಮಾಡಿದ ಬಿಲಾಲ್ ಒಂದು ವೇಳೆ ವಿಫಲಗೊಂಡಲ್ಲಿ ತನ್ನಲ್ಲಿ ಅಡಗಿಸಿಡಲಾಗಿದ್ದ ಬಾಂಬ್ ಸ್ಫೋಟಿಸುವ ಮೂಲಕ ಬೆನಜೀರ್ ಅವರನ್ನು ಹತ್ಯೆ ಮಾಡುವ ಯೋಜನೆ ಇತ್ತು ಎಂದು ಹೇಳಿದ್ದು. ಬೆನಜೀರ್ ಅವರನ್ನು ಹತ್ಯೆಗೈದಿದ್ದು ದಕ್ಷಿಣ ವಝೀರಿಸ್ತಾನದಲ್ಲಿನ ಬುಡಕಟ್ಟು ಜನಾಂಗಕ್ಕೆ ಸೇರಿದ ಬಿಲಾಲ್ ಎಂದು ಮಾಹಿತಿ ನೀಡಿದ್ದಾನೆ.

ಐತಾಜ್ ಮತ್ತು ಶೇರ್ ಜಮಾನ್‌ನ ಪೊಲೀಸ ವಶದಲ್ಲಿ ಇರಬೇಕಾದ ಅವಧಿ ಇಂದು ಮುಕ್ತಾಯಗೊಂಡಿದ್ದರಿಂದ ಪಾಕ್ ಪೊಲೀಸರು ಬಿಗಿ ಭದ್ರತೆಯಲ್ಲಿ ರಾವಲ್ಪಿಯಲ್ಲಿ ಇರುವ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಚೌಧರಿ ಹಬಿಬುಲ್ಲಾ ಅವರು ಐತಾಜ್‌ನನ್ನು ಪೊಲೀಸ ವಶಕ್ಕೆ ಒಪ್ಪಿಸುವ ವಿಚಾರಣೆಯನ್ನು ಕೈಗೆತ್ತಿಕೊಂಡು ಪೊಲೀಸರ ಬೇಡಿಕೆ ಸಮ್ಮತಿಸಿ. ಫೆಬ್ರವರಿ 12ರಂದು ಸಂಶಯಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು ಎಂದು ಆದೇಶ ನೀಡಿದ್ದಾರೆ.
ಮತ್ತಷ್ಟು
ಮಲೇಷಿಯಾ: ಚುನಾವಣೆಗೆ ಸ್ಪರ್ಧಿಸುವಂತೆ ಬಂಧಿತರ ಮೇಲೆ ಒತ್ತಾಯ
ಚೌಧರಿಗೆ ಮತ್ತೆ ಮುಖ್ಯ ನ್ಯಾಯಾಧೀಶ ಪಟ್ಟ: ಷರೀಫ್
ತಮಿಳು ವ್ಯಾಘ್ರರ ದಾಳಿಗೆ 20 ಬಲಿ
ಕರಾಚಿಗೆ ಕಾಲಿಟ್ಟ ಹಕ್ಕಿ ಜ್ವರ
ಆತ್ಮಹತ್ಯಾ ದಾಳಿ ; 43 ಮಂದಿ ಸಾವು
ಪಾಕ್; ಘೋರಿ ಕ್ಷಿಪಣಿ ಪರೀಕ್ಷೆ