ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ವಾತಂತ್ರ್ಯ ದಿನಾಚರಣೆಯಂದು ಉಗ್ರರ ದಾಳಿಗೆ 11 ಬಲಿ
ಶ್ರೀಲಂಕಾದ 60ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನಡೆದ ಎಲ್‌ಟಿಟಿಇ ಆತ್ಮಹತ್ಯಾ ದಾಳಿಗೆ 11 ಜನರು ಮೃತಪಟ್ಟು ನೂರು ಮಂದಿ ಗಾಯಗೊಂಡಿದ್ದಾರೆ. ಕೊಲೋಂಬೊ ರೈಲ್ವೆ ನಿಲ್ದಾಣದ ಬಳಿ ತಮಿಳು ಉಗ್ರರಿಗೆ ಸೇರಿದ ಮಹಿಳೆಯೊರ್ವಳು ಆತ್ಮಾಹುತಿ ದಾಳಿ ಮಾಡುವ ಮೂಲಕ 2002ರಿಂದ ಜಾರಿಯಲ್ಲಿ ಕದನ ವಿರಾಮವನ್ನು ಎಲ್‌ಟಿಟಿಇ ಉಲ್ಲಂಘಿಸಿತು.

ಕೊಲೋಂಬೊದ ಪೋರ್ಟ್ ರೈಲ್ವೆ ನಿಲ್ದಾಣದಲ್ಲಿ ಶ್ರೀಲಂಕನ್ ರಕ್ಷಣಾ ಪಡೆ ನಡೆಸುತ್ತಿದ್ದ ತಪಾಸಣೆಯ ಸಂದರ್ಭದಲ್ಲಿ ಫ್ಲಾಟಫಾರ್ಮ್ ನಂ 3ಕ್ಕೆ ಆಗಮಿಸುತ್ತಿದ್ದ ರೈಲಿನಲ್ಲಿ ಪಯಣಿಸುತ್ತಿದ್ದ ತಮಿಳು ಉಗ್ರರಿಗೆ ಸೇರಿದ ಮಹಿಳಾ ಕಾರ್ಯಕರ್ತೆ ತನ್ನನ್ನು ಸ್ಪೋಟಿಸಿಕೊಳ್ಳುವ ಮೂಲಕ 11 ಜನರ ಸಾವಿಗೆ ಕಾರಣಳಾದಳು.

ಇದಕ್ಕೂ ಮುನ್ನ ದೆಹಿವಾಲಾ ಪ್ರಾಣಿ ಸಂಗ್ರಹಾಲಯದ ಬಳಿ ಬಾಂಬ್ ಸ್ಫೋಟಗೊಂಡಿತ್ತು. ಈ ಸ್ಫೋಟಕ್ಕೆ ಏಳು ನಾಗರಿಕರು ಸೇರಿದಂತೆ ಇಬ್ಬರು ಮಕ್ಕಳು ಗಾಯಗೊಂಡಿದ್ದರು.

ಬಾಂಬ್ ಸ್ಫೋಟಗೊಂಡ ಕೆಲವು ಗಂಟೆಗಳ ನಂತರ ರೈಲು ಸಂಚಾರವನ್ನು ಪುನಃ ಪ್ರಾರಂಭಿಸಿ ನಿಲ್ದಾಣದ ಸುತ್ತ ಬಿಗಿ ಬಂದೋಬಸ್ತ್ ಆಯೋಜಿಸಲಾಯಿತು. ಕೊಲೋಂಬೊದಲ್ಲಿನ ರಾಷ್ಟ್ರೀಯ ಆಸ್ಪತ್ರೆಯ ನೀಡಿರುವ ಮಾಹಿತಿಗಳ ಪ್ರಕಾರ 95 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತಷ್ಟು
ಭುಟ್ಟೊ ಹತ್ಯಾ ಆರೋಪಿ ಪೊಲೀಸರ ವಶಕ್ಕೆ
ಮಲೇಷಿಯಾ: ಚುನಾವಣೆಗೆ ಸ್ಪರ್ಧಿಸುವಂತೆ ಬಂಧಿತರ ಮೇಲೆ ಒತ್ತಾಯ
ಚೌಧರಿಗೆ ಮತ್ತೆ ಮುಖ್ಯ ನ್ಯಾಯಾಧೀಶ ಪಟ್ಟ: ಷರೀಫ್
ತಮಿಳು ವ್ಯಾಘ್ರರ ದಾಳಿಗೆ 20 ಬಲಿ
ಕರಾಚಿಗೆ ಕಾಲಿಟ್ಟ ಹಕ್ಕಿ ಜ್ವರ
ಆತ್ಮಹತ್ಯಾ ದಾಳಿ ; 43 ಮಂದಿ ಸಾವು