ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಪಿಐ ಯೋಜನೆಗೆ ಇರಾನ್ ಆಹ್ವಾನ
ಅಂತರಗಡಿ ಅನಿಲ್ ಕೊಳವೆ ಪೂರೈಕೆ ಯೋಜನೆಯನ್ನು ಜಾರಿಗೆ ಸಂಬಂಧಿಸಿದಂತೆ ಇರಾನ್, ಯೋಜನೆಯ ಪಾಲುದಾರ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನಗಳಿಗೆ ಭಿನ್ನಮತ ಪರಿಹರಿಸುವ ನಿಟ್ಟಿನಲ್ಲಿ ಮೂರು ದೇಶಗಳ ಪೆಟ್ರೋಲಿಯಂ ಖಾತೆ ಸಚಿವರುಗಳ ಸಭೆಯನ್ನು ಟೆಹ್ರಾನ್‌ನಲ್ಲಿ ಕರೆದಿದೆ.

ಇರಾನ್ ತೈಲ ಖಾತೆ ಸಚಿವ ಗುಲಾಮ್ ಹುಸ್ಸೇನ್ ನೋಜಾರಿ ಅವರು ಸಾರಿಗೆ ಶುಲ್ಕಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ಭಿನ್ನಾಭಿಪ್ರಾಯ ಪರಿಹಾರಗೊಳ್ಳಬೇಕಾದ ಅವಶ್ಯಕತೆ ಇರುವ ಕಾರಣ, ಭಾರತ ಮತ್ತು ಪಾಕಿಸ್ತಾನದಿಂದ ಆಗಮಿಸುವ ಪೆಟ್ರೋಲಿಯಮ್ ಖಾತೆ ಸಚಿವರುಗಳೊಂದಿಗೆ ಮಾತುತತೆಯನ್ನು ಫೆಬ್ರವರಿ ತಿಂಗಳ ಅಂತ್ಯದಲ್ಲಿ ಆಯೋಜಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಇರಾನ್ ತೈಲ ಖಾತೆ ಸಚಿವ ನೋಜಾರಿ ಅವರು ಮಾತುಕತೆ ನಡೆಸುವ ನಿಮಿತ್ಯ ಭಾರತ ಮತ್ತು ಪಾಕ್ ಪೆಟ್ರೋಲಿಯಮ್ ಖಾತೆ ಸಚಿವರುಗಳಿಗೆ ಆಹ್ವಾನ ನೀಡಲಾಗಿದ್ದು, ಎರಡು ದೇಶಗಳು ಆಹ್ವಾನವನ್ನು ಸ್ವೀಕರಿಸಿದ್ದಾರೆ.

ಇರಾನ್ ಫೆಬ್ರವರಿ 12 ಮತ್ತು 13 ರಂದು ಮಾತುಕತೆಗೆ ದಿನಾಂಕವನ್ನು ನಿಗದಿಪಡಿಸಿದ್ದು, ಭಾರತದ ಪೆಟ್ರೋಲಿಯಮ್ ಖಾತೆ ಸಚಿವ ಮುರಳಿ ದೇವೊರಾ ಮತ್ತು ಪಾಕಿಸ್ತಾನದ ಆಹ್ಸಾನ್ ಉಲ್ಲಾ ಖಾನ್ ಲಂಡನ್‌‍ನಲ್ಲಿ ಐಪಿಐ ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಜನವರಿ 26ರಂದು ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.

ಅನಿಲ ಪೂರೈಕೆಗೆ ತಗಲುವ ಸಾರಿಗೆ ವೆಚ್ಚವನ್ನು ಇರಾನ್‌ಗೆ ನೀಡುವ ಕುರಿತು ಭಾರತ ಮತ್ತು ಪಾಕ್ ಸಮ್ಮತಿ ಸೂಚಿಸಿವೆ. ಆದರೆ ಈ ಸಂಬಂಧ ಉಭಯ ದೇಶಗಳು ಇನ್ನೂ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಪಾಕಿಸ್ತಾನದ ಭೌಗೋಳಿಕ ಪ್ರದೇಶದ ಮೂಲಕ ಅನಿಲ ಕೊಳವೆ ಮಾರ್ಗ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಲಿದ್ದು. ಪಾಕ್ ಪ್ರದೇಶದಲ್ಲಿ ಹಾದು ಬರುವ ಅನಿಲ ಕೊಳವೆ ಮಾರ್ಗಕ್ಕೆ ನೀಡಬೇಕಾದ ವೆಚ್ಚದ ಕುರಿತು ಎರಡು ದೇಶಗಳ ನಡುವೆ ಒಮ್ಮತವೇರ್ಪಟ್ಟಿಲ್ಲ.

ಇರಾನ್-ಪಾಕಿಸ್ತಾನ-ಭಾರತ ನಡುವಿನ ಅನಿಲ ಕೊಳವೆ ಪೂರೈಕೆ ಮಾರ್ಗದ ಶೇ 75ರಷ್ಟು ಪೂರೈಕೆ ಮಾರ್ಗವು ಪಾಕ್ ಭೂಪ್ರದೇಶದ ಮೂಲಕ ಹಾದು ಭಾರತವನ್ನು ತಲುಪುತ್ತದೆ. ಯೋಜನೆಯನ್ವಯ ಮೂರು ದೇಶಗಳು ಪ್ರತ್ಯೇಕವಾಗಿ ಅನಿಲ ಪೂರೈಕೆಗೆ ಕೊಳವೆ ಮಾರ್ಗವನ್ನು ನಿರ್ಮಿಸಲಿವೆ. ಇರಾನ್ ಪರ್ಸಿಯನ್ ಗಲ್ಫನಿಂದ ಹಿಡಿದು ಪಾಕ್ ಗಡಿಯವರೆಗೆ 1.100 ಕಿಮಿ ಮಾರ್ಗದ ಪೈಪಲೈನ್ ನಿರ್ಮಿಸಲಿದೆ. ಪಾಕಿಸ್ತಾನವು ಇರಾನ್ ಪಾಕ್ ಗಡಿಯಿಂದ ಭಾರತದ ಗಡಿಯವರೆಗೆ 1,035 ಕಿಮಿ ಪೈಪಲೈನ್‌ ಹಾಕಲಿದ್ದು, ಅಂತಿಮವಾಗಿ ಭಾರತವು ಇಚ್ಚಿಸಿದ ಸ್ಥಳಗಳತ್ತ ಕೊಂಡೊಯ್ಯಬಹುದು. 2006ರಲ್ಲಿ ಯೋಜನೆಯ ಅಂದಾಜು ವೆಚ್ಚವು ಏಳು ಶತಕೋಟಿ ಡಾಲರ್ ಆಗಬಹುದು ಎಂದು ಊಹಿಸಲಾಗಿತ್ತು.
ಮತ್ತಷ್ಟು
ಸ್ವಾತಂತ್ರ್ಯ ದಿನಾಚರಣೆಯಂದು ಉಗ್ರರ ದಾಳಿಗೆ 11 ಬಲಿ
ಭುಟ್ಟೊ ಹತ್ಯಾ ಆರೋಪಿ ಪೊಲೀಸರ ವಶಕ್ಕೆ
ಮಲೇಷಿಯಾ: ಚುನಾವಣೆಗೆ ಸ್ಪರ್ಧಿಸುವಂತೆ ಬಂಧಿತರ ಮೇಲೆ ಒತ್ತಾಯ
ಚೌಧರಿಗೆ ಮತ್ತೆ ಮುಖ್ಯ ನ್ಯಾಯಾಧೀಶ ಪಟ್ಟ: ಷರೀಫ್
ತಮಿಳು ವ್ಯಾಘ್ರರ ದಾಳಿಗೆ 20 ಬಲಿ
ಕರಾಚಿಗೆ ಕಾಲಿಟ್ಟ ಹಕ್ಕಿ ಜ್ವರ