ರಾವಲ್ಪಿಂಡಿಯಲ್ಲಿ ಇರುವ ಪಾಕಿಸ್ತಾನದ ಕೇಂದ್ರ ಸೈನಿಕ ಕಚೇರಿಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಕನಿಷ್ಠ 8 ಜನರು ಸಾವಿಗೀಡಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಕೋಟೆಗಳ ನಗರ ರಾವಲ್ಪಿಂಡಿಯ ಆರ್. ಎ ಬಝಾರ್‌ನಲ್ಲಿ ಇರುವ ಭೂಸೇನೆಯ ನ್ಯಾಷನಲ್ ಲಾಜಿಸ್ಟಿಕ್ ಸೆಲ್‌ನಲ್ಲಿ ಬೆಳಿಗ್ಗೆ ಅಂದಾಜು 7-15ಕ್ಕೆ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ರಕ್ಷಣಾ ಪಡೆ ಪ್ರದೇಶವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ.
ಪರಿಹಾರ ಕಾರ್ಯ ಚುರುಕಿನಿಂದ ಸಾಗಿವೆ. ಸಾಕ್ಷ್ಯಾಧಾರಗಳನ್ನು ಶೋಧಿಸುತ್ತಿರುವ ರಕ್ಷಣಾ ಪಡೆಯ ಸಿಬ್ಬಂದಿ, ಬಾಂಬ್ ಸ್ಫೋಟ ಸಂಭವಿಸಿದ ಸ್ಥಳ ವೀಕ್ಷಿಸಲು ಮಾಧ್ಯಮಗಳಿಗೆ ಅವಕಾಶ ನೀಡಿಲ್ಲ.
|