ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಮೂಹ ನಾಶದ ಸಿದ್ದತೆಯಲ್ಲಿರುವ ಖೈದಾ ಉಗ್ರ ವರದಿ
ಆಲ್‌ಖೈದಾ ಉಗ್ರರ ಸಂಘಟನೆಯ ಪ್ರಮುಖ ಅಬುಬ್ ಖಬಾಬ್ ಮಸ್ರಿ ಇನ್ನೂ ಜೀವಂತವಿದ್ದು. ಸಮೂಹ ನಾಶ ಶಸ್ತ್ರಾಸ್ತ್ರದ ಅಭಿವೃದ್ದಿಯಲ್ಲಿ ನಿರತನಾಗಿದ್ದಾನೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಿದೆ. 2006ರಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಈ ಭಯೋತ್ಪಾದಕ ಮೃತಪಟ್ಟಿದ್ದಾನೆ ಎಂದು ಪಾಕಿಸ್ತಾನ ದಾವೆ ಮಾಡಿತ್ತು.

ಇಜಿಪ್ತ ಮೂಲದ ಅಬು ಖಬಾಬ್ ಮಸ್ರಿ ಇನ್ನೂ ಜೀವಂತವಾಗಿದ್ದು. ಆಲ್ ಖೈದಾ ಯೋಜಿಸಿರುವ ಸಮೂಹ ನಾಶದ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ನಿರತನಾಗಿದ್ದಾನೆ. ಮಸ್ರಿ ಸಮೂಹ ನಾಶ ಶಸ್ತ್ರಾಸ್ತ್ರಗಳ ಅಭಿವೃದ್ದಿಯ ಜವಾಬ್ದಾರಿಯನ್ನು ವಹಿಸಿಕೊಂಡಿರುವುದನ್ನು ಹೆಸರು ಹೇಳಲಿಚ್ಚಿಸದ ಪಾಕ್ ಮಿಲಿಟರಿ ಪಡೆಯ ಅಧಿಕಾರಿಗಳು ಹೇಳಿದ್ದಾರೆ.

2001ರಲ್ಲಿ ಅಮೆರಿಕ ಆಲ್‌ಖೈದಾದ ಕೇಂದ್ರ ಕಚೇರಿಯ ಮೇಲೆ ದಾಳಿ ಮಾಡಿದ ನಂತರ ಪುನಃ ಪಾಕಿಸ್ತಾನದ ವಾಯವ್ಯ ಗಡಿ ಪ್ರದೇಶದಲ್ಲಿ ಪುನಃ ಸಂಘಟಿತವಾಗುತ್ತಿದೆ. ಸಂಘಟಿತವಾಗುವುದರ ಜೊತೆಗೆ ಅಮೆರಿಕ ಮತ್ತು ಇತರ ದೇಶಗಳ ವಿರುದ್ಧ ದಾಳಿ ಮಾಡಲು ಅನುಕೂಲವಾಗುವಂತೆ ಕೈಗೆತ್ತಿಕೊಂಡು ಅರ್ಧದಲ್ಲಿ ಕೈಬಿಟ್ಟಿದ್ದ ರಾಸಾಯನಿಕ, ಜೈವಿಕ ಮತ್ತು ವಿಕೀರಣ ಸೂಸುವ ಶಸ್ತ್ರಾಸ್ತ್ರಗಳ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿದೆ.

ಕೆಲ ರಕ್ಷಣಾ ವಿಶ್ಲೇಷಕರ ಪ್ರಕಾರ ಪಾಕಿಸ್ತಾನದ ಗುಡ್ಡಗಾಡು ಪ್ರದೇಶಗಳಲ್ಲಿ ಆಲ್ ಖೈದಾ ಹೇಗೆ ಯುದ್ಧ ಸಾಮಗ್ರಿಗಳನ್ನು ಕಲೆಹಾಕಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಪಾಕಿಸ್ತಾನದ ಮಾಹಿತಿ ಸಚಿವ ನಿಸಾರ್ ಮೆಮನ್ ಅವರು ಅಬು ಖಬಾಬ್ ಮತ್ತು ಮತ್ತು ಆಲ್ ಖೈದಾದ ಶಸ್ತ್ರಾಸ್ತ್ರ ಅಭಿವೃದ್ದಿ ಮಾಡುತ್ತಿರುವ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಮತ್ತಷ್ಟು
ರಾವಲ್ಪಿಂಡಿ ಬಾಂಬ್ ಸ್ಫೋಟ 8 ಸಾವು ಶಂಕೆ
ಮಾನವ ಹಕ್ಕು ಉಲ್ಲಂಘನೆ ಶಾಂತಿ ಪ್ರಕ್ರಿಯೆಗೆ ಭಂಗ: ಯುಎನ್
ಐಪಿಐ ಯೋಜನೆಗೆ ಇರಾನ್ ಆಹ್ವಾನ
ಸ್ವಾತಂತ್ರ್ಯ ದಿನಾಚರಣೆಯಂದು ಉಗ್ರರ ದಾಳಿಗೆ 11 ಬಲಿ
ಭುಟ್ಟೊ ಹತ್ಯಾ ಆರೋಪಿ ಪೊಲೀಸರ ವಶಕ್ಕೆ
ಮಲೇಷಿಯಾ: ಚುನಾವಣೆಗೆ ಸ್ಪರ್ಧಿಸುವಂತೆ ಬಂಧಿತರ ಮೇಲೆ ಒತ್ತಾಯ