ಬರುವ ಮಂಗಳವಾರ ನಡೆಯಲಿರುವ ನಿರ್ಣಾಯಕ ಪ್ರಾಥಮಿಕ ಚುನಾವಣೆಯಲ್ಲಿ ಮತಗಳ ಅಂತರ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹಿಲರಿ ಕ್ಲಿಂಟನ್ ಅವರು ಅಮೆರಿಕದಲ್ಲಿ ಇರುವ ಭಾರತೀಯ ಅನಿವಾಸಿಗಳ ಮತಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ತಾನು ಅಧಿಕಾರಕ್ಕೆ ಬಂದಲ್ಲಿ ಭಾರತದೊಂದಿಗೆ ಸೌಹಾರ್ಧಯುತ ಸಂಬಂಧಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಯ್ದುಕೊಳ್ಳುವುದಾಗಿ ಹೇಳಿದ್ದಾರೆ.
ಜಾಗತಿಕರಣ, ಅಣ್ವಸ್ತ್ರ ಪ್ರಸರಣ ನಿಷೇಧ, ಮತ್ತು ವಾತಾವರಣ ಬದಲಾವಣೆ ಮತ್ತು ಭಯೋತ್ಪಾದನೆಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಂದರ್ಭದಲ್ಲಿ ಭಾರತದ ಅಭಿಪ್ರಾಯವನ್ನು ಕಡೆಗಣಿಸುವಂತಿಲ್ಲ. ಇಂದು ಅಮೆರಿಕದ ಆಂತರಿಕ ರಾಜಕೀಯದಲ್ಲಿ ಭಾರತೀಯ ಮೂಲನಿವಾಸಿಗಳು ಇಂದು ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಅಮೆರಿಕದ ಎಲ್ಲ ಕ್ಷೇತ್ರಗಳಲ್ಲಿ ಹರಡಿರುವ ಅನಿವಾಸಿ ಭಾರತೀಯರ ಕುರಿತು ಹೇಳಿದ್ದಾರೆ.
ಭಾರತ ನನಗೆ ಅಪರಿಚಿತ ದೇಶವಲ್ಲ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ರಾಜೀವ್ ಗಾಂಧಿ ಪ್ರತಿಷ್ಠಾನದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದೆನೆ ಎಂದು ಇಂಡಿಯಾ ಅಬ್ರಾಡ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷ ಪದವಿಗೆ ಪ್ರಬಲ ಅಭ್ಯರ್ಥಿಯಾಗಿರುವ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರು ಅಮೆರಿಕದ ಇತಿಹಾಸದಲ್ಲಿ ಅಮೆರಿಕಕ್ಕೆ ವಲಸೆ ಬಂದ ಯಶಸ್ವಿ ಸಮುದಾಯ ಎಂದು ಭಾರತೀಯ ಮೂಲನಿವಾಸಿಗಳನ್ನು ಶ್ಲಾಘಿಸಿದ್ದಾರೆ.
ಜಗತ್ತಿನ ಎರಡು ಪ್ರಜಾಪ್ರಭುತ್ವದ ಹಿನ್ನಲೆ ಹೊಂದಿದ ಎರಡು ರಾಷ್ಟ್ರಗಳು ಜಾಗತಿಕ ವ್ಯವಹಾರದಲ್ಲಿ ಒಟ್ಟಿಗೆ ಸೇರಿ ರಚನಾತ್ಮಕ ಪಾತ್ರ ನಿರ್ವಹಿಸಬೇಕಿದೆ. ಅಂತಿಮವಾಗಿ ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನ ಬಲಗೊಳಿಸುವ ಮೂಲಕ ಉಭಯ ರಾಷ್ಟ್ರಗಳ ಪ್ರಗತಿಗೆ ಶ್ರಮಿಸು
|